Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕುಡಿ » ಹವಾಮಾನ

ಕಾರೈಕುಡಿ ಹವಾಮಾನ

ಕರೈಕುಡಿಗೆ ಭೇಟಿಕೊಡಲು ಅಕ್ಟೋಬರ್ ಮತ್ತು ಫೆಬ್ರವರಿ ನಡುವಿನ ಅವಧಿಯು ಉತ್ತಮವಾಗಿರುತ್ತದೆ. ಚಳಿಗಾಲದ ಈ ಅವಧಿಯಲ್ಲಿ ಇಲ್ಲಿ ಆಹ್ಲಾದಕರವಾದ ವಾತಾವರಣವಿದ್ದು, ಸ್ಥಳ ವೀಕ್ಷಣೆಗೆ ಹೇಳಿ ಮಾಡಿಸಿದ ಸಮಯವಾಗಿದೆ. ಬಿಸಿಲಿನ ಭಯವಿಲ್ಲದೆ ಪ್ರವಾಸಿಗರು ಕುಣಿದು ಕುಪ್ಪಳಿಸಿ ಸಂತೋಷ ಪಡುವಂತಹ ಸಮಯ ಇದಾಗಿರುತ್ತದೆ. ಅಲ್ಲದೆ ಈ ತಿಂಗಳುಗಳಲ್ಲಿ ಆರ್ದ್ರತೆಯ ಪ್ರಮಾಣ ಸಹ ಕಡಿಮೆ ಇರುತ್ತದೆ.

ಬೇಸಿಗೆಗಾಲ

ಬೇಸಿಗೆಯು ಕರೈಕುಡಿಯಲ್ಲಿ ಅತ್ಯಂತ ಬಿಸಿಲು ಮತ್ತು ಆರ್ದ್ರತೆಯಿಂದ ಕೂಡಿರುತ್ತದೆ. ಇಲ್ಲಿ ಬೇಸಿಗೆಯು ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿ ಜೂನ್ ಮಧ್ಯ ಭಾಗದವರೆಗಿನ ನಾಲ್ಕು ತಿಂಗಳುಗಳ ಕಾಲವಿರುತ್ತದೆ. ಈ ಅವಧಿಯಲ್ಲಿ ಇಲ್ಲಿ ಮೈಸುಡುವ ಬಿಸಿಲು ಮತ್ತು ಮಧ್ಯಾಹ್ನದ ಹೊತ್ತು ಧಗೆ ಅತ್ಯಧಿಕವಾಗಿರುತ್ತದೆ. ಸಂಜೆಗಳು ಆಹ್ಲಾದಕರವಾಗಿರುತ್ತವೆಯಾದರು ಇಬ್ಬನಿ ಬೀಳದಿದ್ದಾಗ ಅತ್ಯಧಿಕ ಆರ್ದ್ರತೆ ಮತ್ತು ಒಣಹವೆಯಿಂದ ಕೂಡಿರುತ್ತವೆ. ಈ ಅವಧಿಯಲ್ಲಿ ಕರೈಕುಡಿಗೆ ಪ್ರವಾಸ ಹೋಗದಿರುವುದು ಉತ್ತಮ.

ಮಳೆಗಾಲ

ಕರೈಕುಡಿಯಲ್ಲಿ ಮಳೆಗಾಲವು ಜೂನ್‍ನಿಂದ ಆಗಸ್ಟ್ ವರೆಗೆ ಇರುತ್ತದೆ. ಒಮ್ಮೊಮ್ಮೆ ಈ ಅವಧಿಯು ಸೆಪ್ಟೆಂಬರ್ ಮಧ್ಯಭಾಗದವರೆಗೆ ಇರುತ್ತದೆ. ಈ ಸ್ಥಳದಲ್ಲಿ ಮಳೆಯು ಸಾಮಾನ್ಯದಿಂದ ಭಾರೀ ಪ್ರಮಾಣದವರೆಗೆ ಬೀಳುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು 30 ಡಿಗ್ರಿ ಸೆಲ್ಶಿಯಸ್‍ವರೆಗೆ ಇಳಿಯುತ್ತದೆ. ಅಲ್ಲದೆ ಈ ಕಾಲದಲ್ಲಿ ಆರ್ದ್ರತೆ ಮತ್ತು ಆಲಿಕಲ್ಲಿನ ಮಳೆ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ.

ಚಳಿಗಾಲ

ಚಳಿಗಾಲವು ಇಲ್ಲಿ ನವೆಂಬರ್ ಕೊನೆಯ ಭಾಗ ಅಥವಾ ಡಿಸೆಂಬರ್ ಮೊದಲ ಭಾಗದಲ್ಲಿ ಆರಂಭವಾಗುತ್ತದೆ. ಕರೈಕುಡಿಯಲ್ಲಿ ಚಳಿ ಅಷ್ಟಾಗಿ ಆಗುವುದಿಲ್ಲ. ಆದರೆ ಸೂರ್ಯನ ತಾಪಮಾನವನ್ನು ಸಹಿಸಿಕೊಳ್ಳುವಷ್ಟರ ಮಟ್ಟಿಗೆ ಇರುತ್ತದೆ. ಹಾಗಾಗಿ ಇಲ್ಲಿ ಉಣ್ಣೆಯ ಬಟ್ಟೆಗಳಿಗೆ ಕೆಲಸವಿರುವುದಿಲ್ಲ. ಸಂಜೆಗಳು ಮತ್ತು ರಾತ್ರಿಗಳು ಇಲ್ಲಿ ಸ್ವಲ್ಪ ಮಟ್ಟಿಗೆ ಚಳಿಯಾಗುತ್ತದೆಯಾದರು ತೆಳುವಾದ ಜಾಕೆಟ್ ಅಥವಾ ಶಾಲುಗಳಿಂದ ನಾವು ಅದನ್ನು ಸಹಿಸಿಕೊಳ್ಳಬಹುದು.