Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕುಡಿ » ಆಕರ್ಷಣೆಗಳು » ವೈರವನ್ ಕೋವಿಲ್ ದೇವಾಲಯ

ವೈರವನ್ ಕೋವಿಲ್ ದೇವಾಲಯ, ಕಾರೈಕುಡಿ

0

ವೈರವನ್ ಕೋವಿಲ್ ದೇವಾಲಯವು ಚೆಟ್ಟಿಯಾರರ ಏಳು ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ. ನಂಬಿಕೆಗಳ ಪ್ರಕಾರ, ಈ ದೇವಾಲಯವು ಚೆಟ್ಟಿಯಾರರ ಮೂರನೆ ಅತ್ಯಂತ ಪ್ರಮುಖ ದೇವಾಲಯವೆಂಬ ಕೀರ್ತಿಗೆ ಭಾಜನವಾಗಿದೆ. ಈ ದೇವಾಲಯವು ಕರೈಕುಡಿಯಿಂದ 10 ಕಿ.ಮೀ ದೂರದಲ್ಲಿ ಕಾರೈಕುಡಿ- ತಿರುಚ್ಚಿರಾಪಳ್ಳಿ ರಸ್ತೆಯಲ್ಲಿ ನೆಲೆಗೊಂಡಿದೆ. ಈ ದೇವಾಲಯದಲ್ಲಿ ನಾವು ಸಂದೀಶ್ವರರ್ ಸ್ವಾಮಿ ಮತ್ತು ಆತನ ಮಡದಿಯಾದ ಕಾಮಾಕ್ಷಿ ಅಮ್ಮಾಳ್‍ರವರನ್ನು ಕಾಣಬಹುದು.

ದೇವಾಲಯದ ಹಿಂದೆ ವೈರವನ್ ತೀರ್ಥಂ ಇದೆ. ಈ ಪವಿತ್ರವಾದ ಕಲ್ಯಾಣಿಯ ನೀರು ಪವಾಡಾತ್ಮಕ ಶಕ್ತಿಯನ್ನು ಹೊಂದಿದ್ದು, ಚರ್ಮ ರೋಗ, ಮೂಳೆ ರೋಗ ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆಯೆಂದು ನಂಬಲಾಗಿದೆ. ಈ ತೀರ್ಥದಲ್ಲಿ ನಿರಂತರವಾಗಿ ಸ್ನಾನ ಮಾಡುವುದರಿಂದ ಕಜ್ಜಿ, ತುರಿಕೆ ಮತ್ತು ಮೊಡವೆಗಳಂತಹ ಚರ್ಮರೋಗಗಳು ವಾಸಿಯಾಗಿರುವ ಜೀವಂತ ಸಾಕ್ಷಿಗಳನ್ನು ನಾವು ನೋಡಬಹುದು. ಇದಲ್ಲದೆ ಹಲವರ ಮೂಳೆ ಮತ್ತು ಸ್ನಾಯು ಸಂಬಂಧಿ ಸಮಸ್ಯೆಗಳು ಸಹ ಈ ತೀರ್ಥ ಸ್ನಾನದಿಂದ ನಿವಾರಣೆಯಾಗಿದೆಯೆಂದು ಹೇಳಲಾಗುತ್ತದೆ. ನಿರಂತರವಾಗಿ ಈ ತೀರ್ಥ ಸ್ನಾನ ಮಾಡುವುದರಿಂದ ಕೀಲು ನೋವು ಮತ್ತು ಸಂಧಿವಾತಗಳು ಸಹ ವಾಸಿಯಾಗುತ್ತದೆಯಂತೆ.

ಇಂದಿಗು ಸಹ ಚೆಟ್ಟಿಯಾರರು ಹಬ್ಬ ಹರಿದಿನಗಳಂದು ಈ ದೇವಾಲಯಕ್ಕೆ ಅತ್ಯಂತ ಪ್ರಾಮುಖ್ಯತೆಯನ್ನು ಕೊಡುತ್ತ ಬಂದಿದ್ದಾರೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat