ಧರ್ಮಪುರಮ್, ಕಾರೈಕಾಲ್ ಪಟ್ಟಣದಿಂದ 1.8 ಕಿ.ಮೀ ದೂರದಲ್ಲಿದ್ದು, ಕಾರೈಕಾಲ್ ಜಿಲ್ಲೆಯ ಪಶ್ಚಿಮ ಬದಿಯಲ್ಲಿದೆ. ಧರ್ಮಪುರಮ್ ಪ್ರದೇಶವು, ಶ್ರೀ ಯಜಮಿರಿನಾಥೀಶ್ವರ ದೇಗುಲಕ್ಕೆ ಪ್ರಸಿದ್ಧವಾಗಿದೆ. ಸಂತ ತಿರುಗ್ನಾನಸಂಬಂದರ್ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಮತ್ತು ದೇವತೆ ಶ್ರೀ ಯಜಮಿರಿನಾಥೀಶ್ವರನ ಹೆಸರಿನಲ್ಲಿ ಪತಿಗಂ (Pathigam) ಹಾಡಿದ್ದರು ಎಂದು ನಂಬಲಾಗಿದೆ. ಪ್ರವಾಸಿಗರಿಗೆ ಅನುಕೂಲವಾಗುವಂಥ ಕಡಿಮೆ ಬೆಲೆಯ ಅನೇಕ ವಸತಿ ಪ್ರದೇಶಗಳೂ ಇಲ್ಲಿವೆ.