ಮೋತಿ ಝೀಲ್ ಎಂಬುದರ ಅಕ್ಷರಶಃ ಅರ್ಥ 'ಮುತ್ತಿನ ಕೆರೆ' ಎಂದು. ಇದು ಕಾನ್ಪುರದ ಸ್ವರೂಪನಗರ ಎಂಬ ಸ್ಥಳದಲ್ಲಿ ಇದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಈ ಕೆರೆಯನ್ನು ಕುಡಿಯುವ ನೀರಿನ ಅನುಕೂಲಕ್ಕಾಗಿ ಅಣೆಕಟ್ಟು ಕಟ್ಟಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಪ್ರಸ್ತುತ ಈ ಕೆರೆ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಏಕೆಂದರೆ, ಇಲ್ಲಿ ಮಕ್ಕಳ ಪಾರ್ಕ್ ಹಾಗು ಆಕರ್ಷಕ ಲ್ಯಾಂಡ್ ಸ್ಕೇಪ್ ಇರುವ ಉದ್ಯಾನವನವಿದೆ.
ನೀಳಚೌಕ ಆಕಾರದಲ್ಲಿರುವ ಈ ಕೆರೆಯ ಒಂದು ಬದಿಯಲ್ಲಿ ಲಾಲಾ ಲಜಪತರಾಯ್ ಆಸ್ಪತ್ರೆ ಇದೆ. ಮತ್ತೊಂದು ಬದಿಯಲ್ಲಿ ಮುನ್ಸಿಪಲ್ ಕಮಿಟಿ ಕಟ್ಟಡ, ಕಾನ್ಪುರ ಅಭಿವೃದ್ಧಿ ಪ್ರಾಧಿಕಾರದ ವಾಟರ್ ಟ್ರೀಟ್ಮೆಂಟ್ ಪ್ಲಾಂಟ್ ಕಟ್ಟಡಗಳು ಇವೆ.
ಮೋತಿ ಝೀಲ್ ನಲ್ಲಿ ಅರಳಿರುವ ಸುಂದರವಾದ ಹೂವುಗಳು ಮತ್ತು ಸ್ವಚ್ಛಂದವಾಗಿ ವಿಹರಿಸುವ ಬಾತುಕೋಳಿಗಳನ್ನು ನೋಡಿದರೆ ಮನಕ್ಕೆ ಏನೋ ಆನಂದವಾಗುತ್ತದೆ. ಮನರಂಜನೆಗೆ ಇದು ಹೇಳಿ ಮಾಡಿ ಸ್ಥಳ. ಮಕ್ಕಳು ದಿನನಿತ್ಯ ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಆಟವಾಡಲು ಬಳಸಿದರೆ, ದೊಡ್ಡವರು ಕೆರೆಯ ಸುತ್ತಲೂ ಕಟ್ಟಿರುವ ವಾಕಿಂಗ್ ಟ್ರಾಕ್ ಮೇಲೆ ನಡೆಯಲು ಬರುತ್ತಾರೆ.