1875ರಲ್ಲಿ ಭಾರತದಲ್ಲಿದ್ದ ಬ್ರಿಟಿಷ್ ಸರಕಾರ ಈ ಕಾನ್ಪುರ ಮೆಮೋರಿಯಲ್ ಚರ್ಚನ್ನು ಕಟ್ಟಿಸಿತು. ಕಾನ್ಪುರದಲ್ಲಿ ಬ್ರಿಟಿಷರ ಮೇಲೆ ನಡೆದ ಹತ್ಯಾಕಾಂಡದ ಸ್ಮಾರಕವಾಗಿ ಈ ಚರ್ಚನ್ನು ಕಟ್ಟಿಸಲಾಯಿತು.
ಈ ವೈಭವೋಪೇತ ಚರ್ಚನ್ನು ಆಲ್ ಸೋಲ್ಸ್ ಕೆಥೆಡ್ರಲ್ ಎಂದು ಕರೆಯಲಾಗುತ್ತಿತ್ತು. ಕೌನ್ಪುರ ಕ್ಲಬ್ ಬಳಿಯ ಅಲ್ಬರ್ಟ್ ಲೇನ್ ನಲ್ಲಿರುವ ಕ್ಯಾಂಟೋನ್ಮೆಂಟ್ನ ಮಧ್ಯಭಾಗದಲ್ಲಿ ಚರ್ಚ್ ಉಪಸ್ಥಿತವಿದೆ. ಕೆಂಪು ಇಟ್ಟಿಗೆಯಿಂದ ಕಟ್ಟಿಸಿದ ಈ ಚರ್ಚ್ ಅನ್ನು ಗೋಥಿಕ್ ಶೈಲಿಯಿಂದ ವಿನ್ಯಾಸಗೊಳಿಸಲಾಗಿದೆ. ಇದನ್ನು ವಿನ್ಯಾಸಗೊಳಿಸಿದವರು ಪೂರ್ವ ಬೆಂಗಾಲ್ ರೇಲ್ವೆಯ ಬ್ರಿಟಿಷ್ ವಾಸ್ತುಶಾಸ್ತ್ರ ವಿನ್ಯಾಸಗಾರರಾಗಿದ್ದ ವಾಲ್ಟರ್ ಗ್ರಾಸ್ ವೀಲ್. ಇದರ ಪಕ್ಕದಲ್ಲಿ ಬ್ರಿಟಿಷ್ ಜನರು ಮತ್ತು ಸೈನಿಕರಿಗೆ ಮೀಸಲಾಗಿದ್ದ ಸ್ಮಶಾನವಿದೆ.
ಈ ಚರ್ಚ್ನ ಪೂರ್ವಭಾಗದಲ್ಲಿ ಒಂದು ಮೆಮೋರಿಯಲ್ ಗಾರ್ಡನ್ ಸಹ ಇದೆ. ಇದನ್ನು ಎರಡು ದ್ವಾರಗಳಿಂದ ತಲುಪಬಹುದು. ಈ ಚರ್ಚ್ ನಲ್ಲಿ ವಿಶಿಷ್ಟವಾದ ಕೆತ್ತನೆಯಿದ್ದು, ಅದರ ಮಧ್ಯಭಾಗದಲ್ಲಿ ದೇವದೂತನ ಪ್ರತಿಮೆಯನ್ನು ಕೆತ್ತಲಾಗಿದೆ ಮತ್ತು ಪ್ರತಿಮೆಯ ಎರಡೂ ಕೈಗಳು ಅಡ್ಡವಾಗಿದ್ದು, ಶಾಂತಿಯನ್ನು ವಿಶ್ವಕ್ಕೆ ಸಾರುವ ಸಂಕೇತದಂತಿವೆ. ಇದನ್ನು ಬ್ರಿಟಿಷ್ ಶಿಲ್ಪಕರ್ಮಿ ಬಾರೋನ್ ಕಾರ್ಲೋ ಮರೊಚೆಟ್ಟಿ.