Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾನ್ಪುರ್ » ಆಕರ್ಷಣೆಗಳು » ಕಮಲ ರಿಟ್ರೀಟ್

ಕಮಲ ರಿಟ್ರೀಟ್, ಕಾನ್ಪುರ್

1

ಕಮಲ ರಿಟ್ರೀಟ್ ಒಂದು ಜನಪ್ರಿಯ ಟೂರಿಸ್ಟ್ ರೆಸಾರ್ಟ್ ಆಗಿದೆ. ಇದನ್ನು ಖ್ಯಾತ ಉದ್ಯಮಿ ಎಂದು ಹೆಸರು ಪಡೆದಿದ್ದ ಪದಮ್ ಪತ್ ಸಿಂಘಾನಿಯಾ ಅವರು 1960ರಲ್ಲಿ ನಿರ್ಮಿಸಿದ್ದು. ಈ ರಿಟ್ರೀಟ್ ಕಮಲಾ ನೆಹರೂ ರಸ್ತೆಯಲ್ಲಿದೆ.

ಈ ಪಾರ್ಕ್ ವಾಸ್ತವವಾಗಿ ಸಿಂಘಾನಿಯಾ ಕುಟುಂಬದ ಒಡೆತನದಲ್ಲಿರುವ ಖಾಸಗಿ ಎಸ್ಟೇಟ್. ಇದು ಪ್ರವಾಸಿಗರ ಕುತೂಹಲ ಕೆರಳಿಸುವ ಅನೇಕ ತಾಣಗಳನ್ನು ಹೊಂದಿದೆ. ಅವುಗಳಲ್ಲಿ ಮ್ಯೂಸಿಯಂ ಕೂಡ ಒಂದು. ಇಲ್ಲಿ ಹಲವಾರು ಸಂಶೋಧನಾತ್ಮಕ ವಸ್ತುಗಳನ್ನು, ಸ್ಮರಣಿಕೆಗಳನ್ನು, ಪುರಾತನ ಇತಿಹಾಸಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಈ ರೆಸಾರ್ಟಿನಲ್ಲಿ ಹಲವು ಉದ್ಯಾನವನ, ಹಸಿರು ಹುಲ್ಲುಹಾಸು, ಕಾಲುವೆಗಳನ್ನು ಕಾಣಬಹುದು. ದೋಣಿ ವಿಹಾರದ ಸೌಲಭ್ಯ ಕೂಡ ಹೊಂದಿದೆ. ಇದು ಅತ್ಯಂತ ಸುಸಜ್ಜಿತವಾದ ಈಜುಗೊಳವನ್ನು ಒಳಗೊಂಡಿದೆ. ರಾತ್ರಿಯ ಹೊತ್ತು ವಿಶೇಷವಾದ ಸೈಕಿಯಾಡಿಲಿಕ್ ದೀಪಗಳನ್ನು ಬೆಳಗಿಸುವುದರಿಂದ ಈ ಕೊಳ ಮನಮೋಹಕವಾಗಿ ಕಾಣುತ್ತದೆ. ಇದನ್ನು ಹೊರತುಪಡಿಸಿ ಇಲ್ಲಿ ಮೃಗಾಲಯವೂ ಇದೆ. ಹಸಿರು ಹಾಸಿದಂಥ ಪ್ರದೇಶದಲ್ಲಿ ಅನೇಕ ಜಾತಿಯ ವೈವಿಧ್ಯಮಯ ಪಕ್ಷಿಗಳು, ಸರೀಸೃಪಗಳು ಮತ್ತು ಪ್ರಾಣಿಗಳು ನಿರ್ಭಯವಾಗಿ ವಿಹರಿಸಿಕೊಂಡಿರುತ್ತವೆ. 1962ರಲ್ಲಿ ನಡೆದ ಇಂಡೋ-ಚೀನಾ ಯುದ್ಧಕ್ಕೂ ಮುನ್ನ ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಚೀನಾದ ಪ್ರಥಮ ಪ್ರಧಾನಿ ಚೌ-ಎನ್-ಲಾಯಿ ಅವರು ಇಲ್ಲಿಗೆ ಭೇಟಿ ನೀಡಿದ್ದರು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat