19ನೇ ಶತಮಾನದಲ್ಲಿ ಜಜೆಸ್ ಮಾವು ಎಂದೂ ಇದನ್ನು ಕರೆಯುತ್ತಿದ್ದರು. ಜಜ್ ಮಾವು ಉಪನಗರ ಗಂಗಾನದಿಯ ತಟದಲ್ಲಿರುವ ಕಾನ್ಪುರದ ಹೊರವಲಯದಲ್ಲಿದೆ. ಪ್ರಸ್ತುತ ಒಂದು ಕೈಗಾರಿಕಾ ಕ್ಷೇತ್ರವಾಗಿರುವ ಇದು, ಭಾರತದ ಸಂಶೋಧಕರ ಸರ್ವೇ ಪ್ರಕಾರ, ಈ ಪ್ರದೇಶ ಮಾನವನ ಅತ್ಯಂತ ಪುರಾತನ ಬೀಡಾಗಿತ್ತು.
ನಗರದಲ್ಲಿ ಸಂಶೋಧನಕಾರರಿಗೆ ಸಿಕ್ಕ ಉಪಕರಣಗಳು, ಮಣ್ಣಿನ ಮಡಿಕೆಗಳು, ಇತರ ವಸ್ತುಗಳು ಕ್ರಿ.ಪೂ. 1300-1200ನೇ ಕಾಲವನ್ನು ಅನಾವರಣಗೊಳಿಸುತ್ತದೆ. ಚಂದ್ರಗುಪ್ತ ಮೌರ್ಯನ ಕಾಲದ್ದೆ ಸಂಬಂಧಪಟ್ಟ ದಂತದ ಮುದ್ರಣ ಸಹ ಭಾರತ ಪುರಾತತ್ವ ಸಂಸ್ಥೆ ಸಂಶೋಧಿಸಿದೆ. ಹೀಗೆ ಸಿಕ್ಕ ವಸ್ತುಗಳನ್ನು ಕಾನ್ಪುರ ಸಂಗ್ರಹಾಲಯದಲ್ಲಿ ಇರಿಸಲಾಗಿದೆ.
ಜನ್ನತೋಂಕಿ ಮಸ್ಜಿದ್ ಎಂಬ ಹಳೆಯ ಮಸೀದಿ ಕೂಡ ಈ ನಗರದಲ್ಲಿದೆ. ಬೆಟ್ಟದ ಮೇಲೆ ಉಪಸ್ಥಿತವಿರುವ ಈ ಮಸೀದಿ ತನ್ನ ಬಿಳಿಯ ಬಣ್ಣ ಮತ್ತು ವಿನ್ಯಾಸದಿಂದಾಗಿ ತಾಜ್ ಮಹಲ್ ಕಟ್ಟಡವನ್ನು ಹೋಲುತ್ತದೆ. ಮಸೀದಿಯಿಂದ ಸ್ವಲ್ಪ ಕೆಳಗೆ ಬಂದರೆ ಮತ್ತೊಂದು ಜನಪ್ರಿಯ ಹಜರತ್ ಮಖದೂಮ್ ಷಾ ಅಲಿ ಮಂದಿರವಿದೆ. ಇದು ಸೂಫಿ ಸಂತನ ಗೋರಿ. ಇದನ್ನು 1355ರಲ್ಲಿ ಫಿರೋಜ್ ಷಾ ತುಘಲಕ್ ಕಟ್ಟಿಸಿದ್ದ.