ಜೈನ್ ಸಮುದಾಯದವರು 24ನೇ ತೀರ್ಥಂಕರರ ಗೌರವ ಸೂಚಕವಾಗಿ ಈ ಜೈನ್ ಗ್ಲಾಸ್ ಟೆಂಪಲ್ ಅನ್ನು ಕಟ್ಟಿಸಿದ್ದಾರೆ. ಈ ಮಂದಿರದಲ್ಲಿ ಭಗವಾನ್ ಮಹಾವೀರ ಹಾಗು ತೀರ್ಥಂಕರರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ. ಅತಿ ಎತ್ತರ ಮೇಲ್ಛಾವಣಿಯನ್ನು ಹೊಂದಿರುವ ಮಂದಿರದಲ್ಲಿ ಈ ಪ್ರತಿಮೆಗಳು ಅಮೃತಶಿಲೆಯ ವೇದಿಕೆಯ ಮೇಲೆ ನಿಂತಿವೆ.
ಕಮಲ ಟವರ್ ಬಳಿಯಿರುವ ಮಹೇಶ್ವರಿ ಮಹಲ್ ನಲ್ಲಿ ಈ ಜೈನ್ ಗ್ಲಾಸ್ ಮಂದಿರ ಇದೆ. ಹೆಸರೇ ಸೂಚಿಸುವ ಹಾಗೆ ಈ ಮಂದಿರ ಸಂಪೂರ್ಣವಾಗಿ ಗಾಜಿನಿಂದ ಮತ್ತು ಎನಾಮೆಲ್ ನಿಂದ ನಿರ್ಮಿತವಾಗಿದೆ. ಸಾಂಪ್ರದಾಯಿಕ ಶಿಲ್ಪಕಲೆಯ ಶೈಲಿಯಿಂದ ವಿನ್ಯಾಸಗೊಳಿಸಿರುವ ಈ ಮಂದಿರ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ಅಲ್ಲಿಯ ಸಂದರ್ಶನಕಾರರು ಹಾಗು ದೂರದಿಂದ ಬರುವ ಪ್ರವಾಸಿಗರನ್ನು ಸೆಳೆಯುತ್ತಿದೆ. ಅಮೃತಶಿಲೆಯಿಂದ ನೆಲವನ್ನು ನಿರ್ಮಿಸಿದ್ದರೆ, ಗೋಡೆಗಳನ್ನು ಮೇಲ್ಛಾವಣಿಯನ್ನು ದರ್ಪಣ ಬಳಸಿ ಅತ್ಯುತೃಷ್ಟವಾದ ವಿನ್ಯಾಸದಿಂದ ಅಲಂಕೃತಗೊಳಿಸಲಾಗಿದೆ. ಇದು ನಿಜಕ್ಕೂ ಒಂದು ಶ್ರೇಷ್ಠ ಕಲೆಯ ಅನಾವರಣ. ಗೋಡೆಗಳ ಮೇಲಿನ ಭಿತ್ತಿಚಿತ್ರವನ್ನು ವರ್ಣಮಯ ಗಾಜಿನಿಂದ ಮಾಡಲಾಗಿದ್ದು, ಇವು ಜೈನರ ಧರ್ಮಗ್ರಂಥದ ಬೋಧನೆಯನ್ನು ಸಾರುತ್ತವೆ. ಬೃಹತ್ತಾದ ಕಮಾನುಗಳನ್ನು ದರ್ಪಣದಿಂದ ಅಲಂಕೃತಗೊಳಿಸಲಾಗಿದೆ.