Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾನ್ಪುರ್ » ಆಕರ್ಷಣೆಗಳು » ಅಲೆನ್ ಫಾರೆಸ್ಟ್ ಝೂ

ಅಲೆನ್ ಫಾರೆಸ್ಟ್ ಝೂ, ಕಾನ್ಪುರ್

4

ಅಲೆನ್ ಫಾರೆಸ್ಟ್ ಝೂವನ್ನು ಕಾನ್ಪುರ ಝೂ ಎಂದಲೂ ಕರೆಯುತ್ತಾರೆ. ಸಹಜವಾದ ದೊಡ್ಡ ಅರಣ್ಯಪ್ರದೇಶದಲ್ಲಿ ಈ ಮೃಗಾಲಯ ಉಪಸ್ಥಿತವಿದೆ. ಸಾಮಾನ್ಯವಾಗಿ ಇತರ ಝೂಗಳಲ್ಲಿ ಪ್ರಾಣಿಗಳನ್ನು ಪಂಜರದಲ್ಲಿ ಅಥವಾ ಬೋನಿನಲ್ಲಿ ಇಟ್ಟಿರುವುದನ್ನು ಕಾಣುತ್ತೇವೆ. ಆದರೆ, ಇಲ್ಲಿ ಪ್ರಾಣಿಗಳು ಸಹಜವಾಗಿ ಕಾಡಿನಲ್ಲಿ ವಿಹರಿಸುತ್ತವೆಯೋ ಎಂಬಂತೆ ಭಾಸವಾಗುತ್ತದೆ. ಇದೇ ಈ ಮೃಗಾಲಯದ ವಿಶೇಷ. ಈ ಮೃಗಾಲಯಕ್ಕೆ ಸರ್ ಅಲೆನ್ ಅವರ ಹೆಸರನ್ನು ಇಡಲಾಗಿದೆ. ಸಸ್ಯಶಾಸ್ತ್ರಜ್ಞರಾಗಿದ್ದ ಅವರು ಈ ಪ್ರಾಜೆಕ್ಟ್‌ನ ಉಸ್ತುವಾರಿಯನ್ನು ಮೊದಲು ವಹಿಸಿಕೊಂಡಿದ್ದರು.

ಅನೇಕ ವಿಭಿನ್ನ ಜಾತಿಯ ಪ್ರಾಣಿಗಳಿಗೆ ಈ ಮೃಗಾಲಯ ಮನೆಯಾಗಿದೆ. ಇಲ್ಲಿ ಮಸ್ಕ್ ಡೀರ್, ಜಗ್ವಾರ್, ಘೇಂಡಾಮೃಗ, ಹುಲಿ, ಸಿಂಹ, ಕೋತಿ, ಲಂಗೂರ್, ಚಿರತೆ ಮುಂತಾದವುಗಳನ್ನು ಕಾಣಬಹುದು. ಈ ಮೃಗಾಲಯದಲ್ಲಿ ಅಕ್ವೇರಿಯಂ ಮತ್ತು ಸಸ್ಯೋದ್ಯಾನ ಕೂಡ ಇವೆ. ಇದರ ಸುತ್ತಮುತ್ತ ಅನೇಕ ಕೊಳಗಳು, ವಿಶಿಷ್ಟ ಜಾತಿಯ ಗಿಡಗಳು ಸಹ ಕಂಡುಬರುತ್ತವೆ. ನಗರದಿಂದ ಕೇವಲ 2 ಕಿ.ಮೀ. ದೂರವಿರುವ ಮೃಗಾಲಯ ಮರಳುಗಾಡಿನಲ್ಲಿ ಕಂಡ ಓಯಾಸಿಸ್ ನಂತೆ ಪ್ರವಾಸಿಗರಿಗೆ ಹಿತಕರ ಮತ್ತು ಆಹ್ಲಾದಕರ ಅನುಭವ ಕೊಡುತ್ತದೆ.

ಏಷ್ಯಾದ ದೊಡ್ಡ ಮೃಗಾಲಯಗಳಲ್ಲಿ ಒಂದಾಗಿರುವ ಈ ಝೂ ಹಲವು ನೈಸರ್ಗಿಕ ಕೊಳಗಳನ್ನು ಹಾಗು ಪುರಾತನ ಮರಗಳನ್ನು ಹೊಂದಿದೆ. ಇದು ಜನಪ್ರಿಯ ಪಿಕ್ನಿಕ್ ತಾಣಗಳಲ್ಲಿ ಒಂದಾಗಿದೆ. ಎಲ್ಲ ವಯೋಮಾನದವರಿಗೆ ಮಾತ್ರವಲ್ಲ, ಮನರಂಜನೆ ಮತ್ತು ಶೈಕ್ಷಣಿಕ ದೃಷ್ಟಿಯಿಂದ ಕೂಡ ಈ ಮೃಗಾಲಯ ಫೆವರಿಟ್ ಸ್ಪಾಟ್ ಆಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat