Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಆಕರ್ಷಣೆಗಳು » ಅರಕಾಲ್ ಕೆಟ್ಟು

ಅರಕಾಲ್ ಕೆಟ್ಟು, ಕಣ್ಣೂರು

1

ಇತ್ತೀಚೆಗೆ ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲಾಗಿರುವ ಅರಕಲ್ ಕೆಟ್ಟು ಅರಮನೆ ರಾಜಮನೆತನದ ವೈಭವವನ್ನು ಪ್ರವಾಸಿಗರಿಗೆ ತಿಳಿಸುವಲ್ಲಿ ತನ್ನತ್ತ ಆಕರ್ಷಿಸುತ್ತದೆ. ಕಣ್ಣೂರು ನಗರದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಈ ಅರಮನೆ ಮೋಪಿಲಾ ಬೇ ಸಮೀಪದಲ್ಲಿದೆ. ಲಕ್ಷ ದ್ವೀಪ ಹಾಗೂ ಕಣ್ಣೂರಿನ  ಆಡಳಿತದ ಅಂದಿನ ಮುಸ್ಲೀಂ ರಾಜ ಮನೆತನಕ್ಕೆ ಇದು ಸೇರಿತ್ತು. ಈ ಅರಮನೆ ಕೆಲವು ಶತಮಾನಗಳ ಹಿಂದೆ ರಾಜ ಅರಕಲ್ ಆಲಿ ರಾಜಾನ ಆಳ್ವಿಕೆಯ ಕಾಲದಲ್ಲಿ ನಿರ್ಮಾಣಗೊಂಡಿತ್ತು.

ಕೇರಳಾದ ಸಂಸ್ಕೃತಿ ಹಾಗೂ ಇಂಗ್ಲೀಷ್ ಕ್ಲಾಸಿಕ್ ಶೈಲಿಯ ವಾಸ್ತುಶಿಲ್ಪ ಶೈಲಿಯಲ್ಲಿ ಮರ ಹಾಗೂ ಬಿಳಿಕಲ್ಲನ್ನು ಬಳಸಿ ಈ ಅರಮನೆಯನ್ನು ನಿರ್ಮಿಸಲಾಗಿದೆ. ಅರಮನೆಯ ಮುಂಭಾಗ ವಿಶಾಲವಾಗಿದ್ದು, ಅನೇಕ ಕೊಠಡಿಗಳನ್ನು ಹೊಂದಿದೆ, ದೊಡ್ಡದಾದ ವರಾಂಡಗಳು, ಮಸೀದಿ, ದರ್ಬಾರ್ ಹಾಲ್ ಇವುಗಳಲ್ಲಿ ಮರದ ಕಿಟಕಿಗಳಿದ್ದು ಅವುಗಳನ್ನು ಬಣ್ಣ ಬಣ್ಣದ ಗಾಜಿನಿಂದ ಅಲಂಕರಿಸಲಾಗಿದೆ.

ಕೇರಳಾ ಸರ್ಕಾರ ಇತ್ತೀಚೆಗೆ ಈ ಅರಮನೆಯ ವಿಶಾಲವಾದ ದರ್ಬಾರ್ ಹಾಲನ್ನು ದುರಸ್ತಿ ಮಾಡಿ ವಸ್ತುಸಂಗ್ರಹಾಲಯವನ್ನಾಗಿ ಮಾರ್ಪಡಿಸಿದೆ. ಇಂದಿಗೂ ಕೂಡ ಇಡೀ ಅರಮನೆಯ ಆಡಳಿತವನ್ನು ಅರಕಾಲ್ ಫ್ರಾಮಿಲಿ ಟ್ರಸ್ಟ್ ನಿರ್ವಹಿಸುತ್ತಿದ್ದು ಪ್ರವಾಸಿಗರಿಂದ ಸಾಧಾರಣ ಶುಲ್ಕವನ್ನು ಪಡೆಯುತ್ತಿದ್ದಾರೆ. ಈ ವಸ್ತು ಸಂಗ್ರಹಾಲಯದಲ್ಲಿ ರಾಜರು ಉಪಯೋಗಿಸುತ್ತಿದ್ದ ಪೀಠೋಪಕರಣಗಳು, ವಸ್ತ್ರಗಳು, ಹಳೇ ಪತಾಯಂಗಳು(ಧಾನ್ಯಗಳನ್ನು ಸಂಗ್ರಹಿಸುವ ಪೆಟ್ಟಿಗೆಗಳು)ರಾಜ ಮನೆತನದವರು ಬಳಸಿದ ಪವಿತ್ರ ಖುರಾನ್, ಹಳೇ ಟೆಲಿಫೋನ್, ಶಸ್ತ್ರಾಸ್ತ್ರಗಳು, ಹಿತ್ತಾಳೆ ಹಾಗೂ ಬೆಳ್ಳಿಯ ಪಾತ್ರೆ-ಕತ್ತಿಗಳು ಹಾಗೂ ಟೆಲಿಸ್ಕೋಪ್ ಗಳನ್ನು ಇಡಲಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri