ಸೇಂಟ್ ಡೋಮ್ನಿಕ್ಸ್ ಪ್ರಾರ್ಥನಾ ಮಂದಿರ ನೈಜವಾಗಿ ಕಟ್ಟಲಾಗಿದ್ದು ಚರ್ಚ್ ರೀತಿಯಲ್ಲಿ. ವಯಂಪು ಪುರಾಯಿಡಂ ನಲ್ಲಿನ ಚಿಟ್ಟಾರ್ ನದಿಯ ದಂಡೆಯ ಮೇಲೆ ಇದು ನೆಲೆ ನಿಂತಿದೆ. ಈ ಪ್ರಾರ್ಥನಾ ಮಂದಿರದ ವಾತಾವರಣ ಮನಸೆಳೆಯುವಂತಿದೆ.
1826 ರಲ್ಲಿ ಇದನ್ನು ಕಟ್ಟಲಾಯಿತು. 1945 ರಲ್ಲಿ ಇದನ್ನು ಪುನರೂಪಿಸಲಾಯಿತು ಮತ್ತು ಇದರ ಪುನರಚನೆ 1961 ರಲ್ಲಿ ಮುಕ್ತಾಯಗೊಂಡಿತು. ಮಾರ್ಚ್ 17, 1977 ರಲ್ಲಿ ಚರ್ಚ್ ತನ್ನ 150 ನೇ ವರ್ಷಾಚರಣೆಯನ್ನು ಆಚರಿಸಿಕೊಂಡಿತು. ಇದಾದ ನಂತರ ಈ ಚರ್ಚನ್ನು ಪ್ರಾರ್ಥನಾ ಮಂದಿರವಾಗಿ ಬದಲಾಯಿಸಲಾಯಿತು. ಪ್ರತಿವರ್ಷ ಈ ಪ್ರಾರ್ಥನಾ ಮಂದಿರ ಸಾವಿರಾರು ಭಕ್ತರು ಮತ್ತು ಪ್ರವಾಸಿಗರನ್ನು ಸೆಳೆಯುತ್ತದೆ.