ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಕಂಜಿರಪಳ್ಳಿ - ಧಾರ್ಮಿಕ ಏಕತೆಯ ವಾಸಸ್ಥಾನ

ಕಂಜಿರಪಳ್ಳಿ ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯಲ್ಲಿರುವ ಪುಟ್ಟ ತಾಲೂಕು ಪಟ್ಟಣ. ಇಲ್ಲಿ ಸಿರಿಯಾನ್ ಕ್ರಿಶ್ಚಿಯನ್ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ಮುಸ್ಲಿಂ ಮತ್ತು ಹಿಂದೂ ಸಮುದಾಯದ ಜನರೂ ಕೂಡ ಇಲ್ಲಿದ್ದಾರೆ. ಈ ರೀತಿಯ ಧಾರ್ಮಿಕ ವಸಾಹತು ಕಂಜಿರಪಳ್ಳಿಯ ಸಂಸ್ಕ್ರತಿಯ ಮೇಲೆ ಪರಿಣಾಮ ಬೀರಿದೆ.

ಕಂಜಿರಪಿಳ್ಳಿ ಚಿತ್ರಗಳು, ಮೀನಾಕ್ಷಿ ದೇವಸ್ಥಾನ - ಉತ್ಸವದಲ್ಲಿಯ ಮೆರವಣಿಗೆ
Image source: en.wikipedia.org

ಒಂದು ಕಾಲದಲ್ಲಿ ಈ ಪ್ರದೇಶದಲ್ಲಿ ಕಂಜಿಮ್ ಮರಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಕಾಣಿಸಿದ ಪರಿಣಾಮ ಕಂಜಿರಪಳ್ಳಿ ಎಂಬ ಹೆಸರು ಬಂದಿದೆ. ಈ ಪ್ರದೇಶದಲ್ಲಿ ಕೊಯ್ಯನ್ ಬುಡಕಟ್ಟು ಜನರು ಮೂಲ ನಿವಾಸಿಗರು. ತಮಿಳರು ಒಳ ಬಂದ ನಂತರ ತಮಿಳರು ಇಲ್ಲಿಗೆ ವಲಸೆ ಬರುವ ಸಂಖ್ಯೆ ಹೆಚ್ಚಾಗಿ ತಮಿಳು ವಸಾಹತು ಹುಟ್ಟಿಕೊಂಡಿತು. ವಲಸೆ ಬಂದ ಪಾಂಡ್ಯನ್ ರಾಜ ಈ ಪ್ರದೇಶವನ್ನು ಪಡೆದುಕೊಂಡ. ಇಲ್ಲಿಗೆ ವಲಸೆ ಬಂದ ಬಹುಪಾಲು ತಮಿಳರು ವ್ಯಾಪಾರಿಗಳಾಗಿದ್ದು ಇಲ್ಲಿ ನೆಲೆ ನಿಂತ ನಂತರ ಕೃಷಿಯನ್ನು ಆರಂಭಿಸಿದರು. ಮೊದಲ ತಮಿಳು ವಸಾಹತುಗಾರರನ್ನು ಚೆಟ್ಟಿನಾಡ್ ಹಳ್ಳಿಗೆ ಸೇರಿದ ಕಣ್ಣೂರು ಚೆಟ್ಟಿಗಳೆಂದು ಕರೆಯಲಾಗುತ್ತಿತ್ತು.

ಧಾರ್ಮಿಕ ಐಕ್ಯತೆಯ ಪ್ರತಿರೂಪ

ಇಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ ಗಣಪತಿ ಕೋವಿಲ್, ಸೇಂಟ್ ಮೇರಿಸ್ ಚರ್ಚ್, ಮಧುರೈ ಮೀನಾಕ್ಷಿ ದೇವಸ್ಥಾನ, ನೈನಾರು ಮಸೀದಿ, ಸೇಂಟ್ ಡೋಮ್ನಿಕ್ಸ್ ಸೈರೋ ಮಲಬಾರ್ ಕ್ಯಾಥೋಲಿಕ್ ಪ್ರಾರ್ಥನಾ ಮಂದಿರ ಮತ್ತು ಇನ್ನೂ ಹಲವು. ಗಣಪತಿಯಾರ್ ದೇವಸ್ಥಾನ ಅತ್ಯಂತ ಪುರಾತನವಾಗಿದ್ದು ಈ ಪ್ರದೇಶದಲ್ಲಿ ಪ್ರಭಾವವನ್ನು ಹೊಂದಿದೆ ಎಂಬುದಕ್ಕೆ ಹಲವಾರು ಸಾಕ್ಷ್ಯಗಳಿವೆ. ಇಲ್ಲಿನವರು ಪಾಲಿಸುವ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಇದೊಂದು ಉದಾಹರಣೆ. ಒಂದು ಕಾಲದಲ್ಲಿ ಪ್ರಮುಖ ಮಾರಾಟ ಕೇಂದ್ರವಾಗಿದ್ದ ನಿಲಕ್ಕಲ್ ಎಂಬ ಈ ಪ್ರದೇಶದಲ್ಲಿ ಸಿರಿಯಾನ್ ಕ್ಯಾಥೋಲಿಕ್ ಸಮುದಾಯದ ಮಂದಿ ದೊಡ್ಡ ಸಂಖ್ಯೆಯಲ್ಲಿದ್ದಾರೆ.

ಇಲ್ಲಿನ ಹಳೆಯದಾದ ಪಝಾಯಾ ಪಳ್ಳಿ ಅಥವಾ ಸೇಂಟ್ ಮೇರಿಸ್ ಓಲ್ಡ್ ಚರ್ಚ್ ಅನ್ನು 1449 ಕ್ಕೂ ಮುಂಚೆಯೇ ಮೊದಲು ಪೋರ್ಚುಗೀಸರು ಭಾರತಕ್ಕೆ ಕಾಲಿಟ್ಟಾಗಲೇ ಕಟ್ಟಿಸಲಾಗಿದೆ. ಸಾವಿರಾರು ಮುಸ್ಲೀಮರು ಪ್ರತಿವರ್ಷ ಭೆಟಿ ನೀಡುವ ನೈನಾರು ಮಸೀದಿ ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ. ಈ ಮಸೀದಿಯನ್ನು ಹಿಂದೂ ದೇವತೆ ಅಯ್ಯಪ್ಪನ ಭಕ್ತನಾದ ಮುಸ್ಲಿಂ ಸಂತನೊಬ್ಬನ ನೆನಪಿನಲ್ಲಿ ಕಟ್ಟಿಸಲಾಗಿದೆ.

Please Wait while comments are loading...