Search
  • Follow NativePlanet
Share
ಮುಖಪುಟ » ಸ್ಥಳಗಳು» ಕಂಜನೂರ್

ಶುಕ್ರನ ದರ್ಶನಕ್ಕಾಗಿ ಕಂಜನೂರಿಗೆ ಭೇಟಿ ಕೊಡಿ

5

ದಕ್ಷಿಣ ಭಾರತವು ಹಲವಾರು ಪುಣ್ಯ ಕ್ಷೇತ್ರಗಳಿಂದ ಪ್ರಸಿದ್ದಿಯನ್ನು ಪಡೆದಿದೆ. ಈ ಪುಣ್ಯ ಕ್ಷೇತ್ರಗಳಲ್ಲಿ ತಮಿಳುನಾಡಿನ ಕಂಜನೂರ್ ನಲ್ಲಿರುವ ಶುಕ್ರನ ದೇವಸ್ಥಾನವೂ ಒಂದು. ತಮಿಳುನಾಡಿನ ತಂಜಾವೂರಿನಲ್ಲಿರುವ ಕಂಜನೂರ್ ಗ್ರಾಮದಲ್ಲಿ ಶುಕ್ರನ ದೇವಸ್ಥಾನವಿದೆ.

ಕುಂಭಕೋಣಂನಿಂದ ಸುಮಾರು 18 ಕಿ.ಮೀ. ಈಶಾನ್ಯಕ್ಕೆ ಕಾವೇರಿ ನದಿಯ ಉತ್ತರ ದಂಡೆಯಲ್ಲಿ ಕಂಜನೂರ್ ಗ್ರಾಮವಿದ್ದು, ಅಲ್ಲಿರುವ ಅಗ್ನೀಶ್ವರರ್ ಸ್ವಾಮಿ ದೇವಸ್ಥಾನದಿಂದಾಗಿ ಈ ಗ್ರಾಮ ಪ್ರಸಿದ್ಧಿಯನ್ನು ಪಡೆದಿದೆ. ದೇವಸ್ಥಾನ ಶಿವನದ್ದಾಗಿದ್ದರೂ ಇಲ್ಲಿ ಶುಕ್ರನನ್ನು ಪೂಜಿಸಲಾಗುತ್ತದೆ. ಕಾವೇರಿ ನದಿ ಮುಖಜದಲ್ಲಿರುವ ನವಗ್ರಹಗಳ ಮಂದಿರಗಳಲ್ಲಿ ಇದೂ ಒಂದಾಗಿದೆ. ದೇವಸ್ಥಾನದೊಂದಿಗೆ ಸುತ್ತಮುತ್ತಲಿರುವ ಸಣ್ಣಸಣ್ಣ ಬೆಟ್ಟಗಳು ಪ್ರವಾಸಿಗರ ಗಮನಸೆಳೆಯುತ್ತದೆ.

ಕಂಜನೂರ್ ಇತಿಹಾಸ

ಶುಕ್ರನ ರೂಪದಲ್ಲಿ ಶಿವನೇ ಈ ದೇವಸ್ಥಾನದಲ್ಲಿ ಅಗ್ನೀಶ್ವರರ್ ಆಗಿ ನೆಲೆನಿಂತಿದ್ದಾನೆ. ಸೂರ್ಯನಾರ್ ಕೊಯಿಲ್ ನಲ್ಲಿ ಈ ದೇವಸ್ಥಾನವಿದ್ದು, ಇಲ್ಲಿ ಸೂರ್ಯ ಹಾಗೂ ನವಗ್ರಹಗಳನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನದ ಸಂಪ್ರದಾಯವೆಂದರೆ ಭಕ್ತರು ದಕ್ಷಿಣ ಭಾಗದಿಂದ ಒಳಪ್ರವೇಶಿಸಬೇಕು. ಶಿವ ಮತ್ತು ಪಾರ್ವತಿಯ ಮೂರ್ತಿಗಳು ಬಲಭಾಗದಲ್ಲಿದ್ದರೆ, ಎಡಭಾಗದಲ್ಲಿ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನದ ವಿನ್ಯಾಸ ಅತ್ಯಾಕರ್ಷಕವಾಗಿದೆ ಮತ್ತು ಪೂರ್ವ ದಿಕ್ಕಿಗೆ ಮುಖಮಾಡಿಕೊಂಡು ಐದು ಹಂತದ ಭವ್ಯ ಗೋಪುರವಿದೆ.

ಕಂಜನೂರ್ ಹತ್ತಿರದ ಪ್ರವಾಸಿ ಸ್ಥಳಗಳು, ದೇವಾಲಯಗಳು

ಒಂಭತ್ತು ನವಗ್ರಹಗಳಿಗೆ ಪ್ರತ್ಯೇಕವಾಗಿರುವ ಒಂಭತ್ತು ದೇವಸ್ಥಾನಗಳ ಪೈಕಿ ಎಂಟು ದೇವಸ್ಥಾನಗಳನ್ನು ಕಂಜನೂರ್ ನ ಆಸು ಪಾಸಿನಲ್ಲೆ ಕಾಣಬಹುದು. ಅವುಗಳೆಂದರೆ, ತಿರುನಲ್ಲಾರ್(ಶನಿ ಗ್ರಹ), ಕಂಜನೂರ್(ಶುಕ್ರ ಗ್ರಹ), ಸೂರ್ಯನಾರ್ ಕೋಯಿಲ್(ಸೂರ್ಯ ದೇವತೆ), ತಿರುವೆಂಕಾಡು(ಬುಧ ಗ್ರಹ), ತಿರುನಾಗೇಸ್ವರಂ(ರಾಹು), ತಿಂಗಳೂರ್(ಚಂದ್ರ), ಕೀಳ್ಪೆರುಂಪಳ್ಳಂ(ಕೇತು).

ತಲುಪುವ ಬಗೆ

ರೈಲಿನ ಮೂಲಕ ಕಂಜನೂರ್ ಗೆ ಹೋಗಬಯಸುವಿರಾದರೆ, ತಿರುಚ್ಚಿ ಜಂಕ್ಷನ್ ಇಲ್ಲವೆ ಕುಂಭಕೋಣ ಹತ್ತಿರದಲ್ಲಿರುವ ರೈಲು ನಿಲ್ದಾಣಗಳು. ಈ ನಿಲ್ದಾಣಗಳಿಂದ ಕಂಜನೂರ್ ಗೆ ತೆರಳಲು ಬಸ್ಸುಗಳು ಅಥವಾ ಟ್ಯಾಕ್ಸಿಗಳು ಸುಲಭವಾಗಿ ದೊರೆಯುತ್ತವೆ.

ಹವಾಮಾನ

ಕಂಜನೂರ್ ಉತ್ತಮವೆನ್ನಬಹುದಾದ ಹವಾಮಾನ ಗುಣಲಕ್ಷಣವನ್ನು ಹೊಂದಿದೆ.

ಕಂಜನೂರ್ ಪ್ರಸಿದ್ಧವಾಗಿದೆ

ಕಂಜನೂರ್ ಹವಾಮಾನ

ಉತ್ತಮ ಸಮಯ ಕಂಜನೂರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕಂಜನೂರ್

  • ರಸ್ತೆಯ ಮೂಲಕ
    ರಸ್ತೆ ಮೂಲಕ ಪ್ರಯಾಣಿಸುವುದಾದರೆ ತಮಿಳುನಾಡಿನ ಸರ್ಕಾರಿ ಬಸ್ ಗಳ ಮೂಲ ತಂಜಾವೂರು ಮತ್ತು ಕಂಜನೂರಿಗೆ ತಲುಪಬಹುದು. ತಿರುಚ್ಚಿ ಮತ್ತು ಮಧುರೈನಿಂದಲೂ ಕಂಜನೂರ್ ಗೆ ಬಸ್ ಗಳಿವೆ. ಖಾಸಗಿ ಬಸ್ ಗಳಲ್ಲಿಯೂ ಕಂಜನೂರ್ ಗೆ ಪ್ರಯಾಣಿಸಬಹುದು. ತಿರುಚ್ಚಿ ವಿಮಾನ ನಿಲ್ದಾಣದಿಂದ ಕಂಜನೂರ್ ಗೆ ಟ್ಯಾಕ್ಸಿ ಮೂಲಕವೂ ಪ್ರಯಾಣಿಸಬಹುದು. ತಿರುವನಂತಪುರಂ, ಕನ್ಯಾಕುಮಾರಿ, ಮಧುರೈ, ಬೆಂಗಳೂರು ಮತ್ತು ಚೆನ್ನೈನಿಂದಲೂ ರಸ್ತೆ ಮಾರ್ಗವಾಗಿ ಕಂಜನೂರ್ ಗೆ ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ರೈಲಿನಿಂದ ಪ್ರಯಾಣಿಸುವುದಾದರೆ ತಿರುಚ್ಚಿ ಜಂಕ್ಷನ್ ನಲ್ಲಿ ಇಳಿದು ಮತ್ತೆ 58 ಕಿ.ಮೀ. ಪ್ರಯಾಣಿಸಬೇಕು. ಇಲ್ಲಿಂದ ಮಧುರೈ ಮತ್ತು ಚೆನ್ನೈಗೆ ಹೆಚ್ಚಿನ ರೈಲುಗಳಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕಂಜನೂರು ತಾಂಜವೂರು ಜಿಲ್ಲೆಯಲ್ಲಿದೆ. ಇದನ್ನು ಸೂರ್ಯನ್ ಕೊಯಿಲ್ ಎಂದೂ ಕರೆಯಲಾಗುತ್ತದೆ. ಇದು ಕುಂಭಕೋಣಂನಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ. ತಿರುಚಿ ವಿಮಾನದಿಂದ ತಾಂಜಾವೂರಿಗೆ 58 ಕಿ.ಮೀ. ದೂರವಿದೆ. ಚೆನ್ನೈಯಿಂದ ತಿರುಚನಾಪಳ್ಳಿಗೆ ಹೆಚ್ಚಿನ ವಿಮಾನಗಳಿವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat