Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಧಮಲ್ » ಆಕರ್ಷಣೆಗಳು » ಫುಲ್ಬನಿ

ಫುಲ್ಬನಿ, ಕಂಧಮಲ್

1

ಫುಲ್ಬನಿಯು ಕಂಧಮಲ್‍ನ ಆಡಳಿತ ಕೇಂದ್ರವಾಗಿದೆ. ಈ ಸ್ಥಳವು ವೈವಿಧ್ಯಮಯವಾದ ಪ್ರಾಣಿ ಮತ್ತು ಸಸ್ಯ ಸಂಪತ್ತಿನ ಆಗರವನ್ನು ಮತ್ತು ಮಾನವರಿಂದ ಕಲುಷಿತಗೊಳ್ಳದ ದಟ್ಟ ಕಾಡು ಹಾಗು ಎತ್ತರವಾದ ಬೆಟ್ಟಗಳಿಂದ ಕೂಡಿದೆ. ಫುಲ್ಬನಿಯು ಹಲವಾರು ಸಣ್ಣ ಮತ್ತು ದೊಡ್ಡ ಜಲಪಾತಗಳ ನೆಲೆವೀಡಾಗಿದೆ. ಸಾರ್ವಕಾಲಿಕವಾಗಿ ಹರಿಯುವ ಸಲುಂಕಿ ನದಿಯು  ದಟ್ಟವಾದ ಕಾಡುಗಳ ಮಧ್ಯೆ ಹರಿಯುತ್ತದೆ. ಇದು ಬೆಟ್ಟ ಗುಡ್ಡಗಳ ನಡುವೆ ಹರಿಯುತ್ತ, ಹಲವಾರು ಜಲಪಾತಗಳನ್ನು ಮತ್ತು ಕಣಿವೆಯನ್ನು ನಿರ್ಮಿಸಿದೆ. ನಿಗೂಢವಾದ ಸಲುಂಕಿ ನದಿಗೆ ಅಡ್ಡಲಾಗಿ " ಪಿಲಸಲುಕಿ" ಎಂಬ ಜಲಾಶಯವನ್ನು ನಿರ್ಮಿಸಲಾಗಿದೆ. ಇದರ ಸುತ್ತಲು ಹಚ್ಚ ಹಸಿರಿನಿಂದ ಕೂಡಿದ ದಟ್ಟವಾದ ಕಾಡು ಜಲಾಶಯದ ಅಂದವನ್ನು ಇಮ್ಮಡಿಗೊಳಿಸಿದೆ. ಇದರಿಂದಾಗಿ ಇದು ಇಲ್ಲಿನ ಪ್ರಸಿದ್ಧ ವಿಹಾರ ತಾಣವಾಗಿ ಗುರುತಿಸಿಕೊಂಡಿದೆ.

ಸಲುಂಕಿ ನದಿಯ ಸುತ್ತ ಹಲವಾರು ದೆವ್ವದ ಕತೆಗಳು ಹುಟ್ಟಿಕೊಂಡಿವೆ. ಬೆಟ್ಟದ ತಪ್ಪಲಿನಲ್ಲಿ ಮತ್ತು ನದಿಯ ಅಕ್ಕ ಪಕ್ಕ ನೆಲೆಗೊಂಡಿರುವ ಬುಡಕಟ್ಟು ಜನರಿಂದ ಈ ಜನಪದರ ಭೂತದ ಕತೆಗಳನ್ನು ನೀವು ಸಹ ಕೇಳಬಹುದು. ಹಲವಾರು ಪರಿಸರ ಆಸಕ್ತರು ಈ ನಯನ ಮನೋಹರವಾದ ಸ್ಥಳವನ್ನು ನೋಡಲು ಇಲ್ಲಿಗೆ ಆಗಮಿಸಿ, ನೋಡಿ ಸಂತಸ ಪಟ್ಟಿದ್ದಾರೆ. ಇದು ನಮ್ಮ ದೈನಂದಿನ ಒತ್ತಡವನ್ನು ಮರೆಸುವಂತಹ ಮೋಹಕತೆಯನ್ನು ತನ್ನಲ್ಲಿ ಒಳಗೊಂಡಿದೆ. ಫುಲ್ಬನಿಗೆ ಸಾಗುವ ಹಳ್ಳ ದಿನ್ನೆಗಳ ಹಾದಿಯು ನೋಡುಗರಿಗೆ ಮನಮೋಹಕವಾದ ಪ್ರಾಕೃತಿಕ ವೈಭವದ ದರ್ಶನವನ್ನು ನೀಡುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun