Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಧಮಲ್ » ಆಕರ್ಷಣೆಗಳು » ಪಟುಡಿ ಜಲಪಾತ

ಪಟುಡಿ ಜಲಪಾತ, ಕಂಧಮಲ್

1

ಪಟುಡಿ ಜಲಪಾತವು ಫುಲ್ಬನಿಯಿಂದ 15 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಬಡ ಸಲುಂಕಿ ನದಿಯ ನೀರು ದಟ್ಟವಾದ ಅರಣ್ಯದಲ್ಲಿ ಹರಿಯುತ್ತ, ಕಲ್ಲು ಬಂಡೆಗಳಿಂದ ಕೂಡಿದ ಪರ್ವತದ ಮೇಲಿನಿಂದ 100 ಮೀಟರ್ ಆಳಕ್ಕೆ ಧುಮ್ಮಿಕ್ಕುವಾಗ ಈ ಅದ್ಭುತವಾದ ಜಲಪಾತ ಸೃಷ್ಟಿಗೊಂಡಿದೆ. ನಗರದ ಜಂಜಡಗಳಿಂದ ಬೇಸತ್ತ ಜನರು ತಮ್ಮ ರಜೆಯನ್ನು ಇಲ್ಲಿ ವಿಶ್ರಾಂತಿ ಪಡೆಯುತ್ತ ಕಳೆಯಬಹುದು. ಇಲ್ಲಿನ ಪ್ರಶಾಂತವಾದ ವಾತಾವರಣವು, ಜಲಪಾತದ ಧುಮ್ಮಿಕ್ಕುವ ಸದ್ದಿನ ಹಿಮ್ಮೆಳದೊಂದಿಗೆ ಅಭೂತಪೂರ್ವ ಅನುಭವವನ್ನೊದಗಿಸುತ್ತದೆ.

ಪಟುಡಿ ಜಲಪಾತವು ಛಾಯಾಗ್ರಹಣ ಮಾಡುವವರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಈ ಸ್ಥಳದ ಸೌಂದರ್ಯಕ್ಕಾಗಿ ಹಲವಾರು ಪ್ರಾದೇಶಿಕ ಭಾಷೆಯ ಚಲನಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. ಇಲ್ಲಿನ ಪ್ರಶಾಂತ ಪರಿಸರದಲ್ಲಿ ಕುಟುಂಬದೊಂದಿಗೆ ವಿಹಾರಕ್ಕೆ ಬಂದು ಜನರು ಕಾಲ ಕಳೆಯುತ್ತಿರುತ್ತಾರೆ. ಪುಟುಡಿಗೆ ಉತ್ತಮ ರಸ್ತೆ ಸಂಪರ್ಕವಿದೆ. ಹಾಗಾಗಿ ಇಲ್ಲಿಗೆ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಪುಟುಡಿಗೆ ಭೇಟಿ ನೀಡಲು ಚಳಿಗಾಲದ ಅವಧಿ ಉತ್ತಮವಾಗಿರುತ್ತದೆ. ಆಗ ಇಲ್ಲಿನ ವಾತಾವರಣವು ತಂಪಾಗಿದ್ದು, ನೀರು ತಣ್ಣಗೆ ಇರುತ್ತದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri