ಕೈಲಾಸನಾಥರ್ ದೇವಾಲಯ ಅಥವಾ ಕೈಲಾಸನಾಥ ದೇವಾಲಯವು ಬಹುಶಃ ನಗರದಲ್ಲಿನ ಅತ್ಯಂತ ಹಳೆಯ ದೇವಾಲಯ. ಇದನ್ನು ಶಿವನಿಗಾಗಿ ಎಂಟನೆಯ ಶತಮಾನದಲ್ಲಿ ಪಲ್ಲವರಾಜ ನರಸಿಂಹವರ್ಮನು ಕಟ್ಟಿಸಿದನು. ಶಿವಭಕ್ತರು ವರ್ಷವೂ ಇದನ್ನು ಸಂದರ್ಶಿಸುವರು.
ಇಲ್ಲಿ ಸುತ್ತಲೂ ಮರಳುಗಲ್ಲಿನ ಗೋಡೆ ಇದ್ದು , ಆ ಕಾಲದ ಶ್ರೇಷ್ಠ ಕುಶಲಕಲೆಗಾರಿಕೆಗೆ ಉದಾಹರಣೆಯಾದಂಥ ಸುಂದರ ಕೆತ್ತನೆಗಳ್ನ್ನು ಹೊಂದಿದೆ. ದೇವಾಲಯದ ವಾಸ್ತುಶಿಲ್ಪವು ದ್ರಾವಿಡ ಶೈಲಿಯಲ್ಲಿದೆ. ಈ ಕಾರಣದಿಂದಾಗಿ ಇಲ್ಲಿನ ಗೋಡೆ ಮತ್ತು ಕಂಬಗಳ ಮೇಲೆ ಅನೇಕ ಅರೆಪ್ರಾಣಿ ದೇಹದ ದೇವತೆಗಳ ಕೆತ್ತನೆ ಕಂಡುಬರುತ್ತದೆ.
ಉತ್ತಮ ವಾಸ್ತುಶಿಲ್ಪದಿಂದಷ್ಟೇ ಅಲ್ಲದೆ ಈ ದೇವಾಲಯವು ಒಂದು ಚಿಕ್ಕ ಅರೆಗತ್ತಲೆಯ ಗುಡಿಯ ಮೇಲಿನ 'ವಿಮಾನ'ದಿಂದಾಗಿಯೂ ವಿಶಿಷ್ಟವಾಗಿದೆ. ದೇವಾಲಯವು ನಟರಾಜನ ರೂಪದಲ್ಲಿರುವ ಶಿವನ ಅನೇಕ ಭಿತ್ತಿಗಳನ್ನೂ ಹೊಂದಿದೆ.