Search
  • Follow NativePlanet
Share
ಮುಖಪುಟ » ಸ್ಥಳಗಳು » ಕಂಚನಜುಂಗಾ » ಆಕರ್ಷಣೆಗಳು » ಕಂಚನ್ ಜುಂಗಾ ರಾಷ್ಟ್ರೀಯ ಉದ್ಯಾನವನ

ಕಂಚನ್ ಜುಂಗಾ ರಾಷ್ಟ್ರೀಯ ಉದ್ಯಾನವನ, ಕಂಚನಜುಂಗಾ

1

ಕಂಚನ್ ಜುಂಗಾ ರಾಷ್ಟ್ರೀಯ ಉದ್ಯಾನವನವನ್ನು 1977ರಲ್ಲಿ ಸ್ಥಾಪನೆ ಮಾಡಲಾಯಿತು. ಇದು ಸಿಕ್ಕಿಂ ರಾಜ್ಯದಲ್ಲಿರುವ ಅತ್ಯಂತ ದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದೆ. 850 ಚ.ಕಿ.ಮೀ ನಷ್ಟು ವಿಸ್ತಾರವನ್ನು ಹೊಂದಿರುವ ಈ ಉದ್ಯಾನವನವು ಸಿಕ್ಕಿಂನ ಉತ್ತರ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಈ ಉದ್ಯಾನವನದ ಉತ್ತರಕ್ಕೆ ಟೆಂಟ್ ಶಿಖರವಿದ್ದರೆ, ಪೂರ್ವದಲ್ಲಿ ಮೌಂಟ್ ಲಮೊ ಅಂಗ್ಡೆನ್ ಪ್ರಪಾತವಿದೆ. ದಕ್ಷಿಣಕ್ಕೆ ನರ್ಸಿಂಗ್ ಮತ್ತು ಪಂಡಿಮ್ ಶಿಖರಗಳಿದ್ದರೆ, ಪಶ್ಚಿಮಕ್ಕೆ ಕಂಚನ್ ಜುಂಗಾ ಪರ್ವತವಿದೆ.

ಈ ಉದ್ಯಾನವನವು ಜೈವಿಕವಾಗಿ ಪರಿಸರ ಮಾಲಿನ್ಯದಿಂದ ಮತ್ತು ಜನ ಸಂಪರ್ಕದಿಂದ ದೂರವಿರುವುದರಿಂದಾಗಿ ಇಲ್ಲಿನ ಪ್ರಾಣಿಗಳು ಅತ್ಯಂತ ಸುರಕ್ಷಿತವಾಗಿವೆ. ಇಲ್ಲಿ ಹಿಮ ಚಿರತೆ, ಹಿಮಾಲಯನ್ ಕಪ್ಪು ಕರಡಿ, ಕೆಂಪು ಪಾಂಡಾ ಮತ್ತು ಚುಕ್ಕೆ ಜಿಂಕೆಗಳಂತಹ ಪ್ರಾಣಿಗಳನ್ನು ನಾವು ನೋಡಬಹುದು. ಈ ಉದ್ಯಾನವನದ ಕೆಲವು ಭಾಗಗಳಿಗೆ ಪ್ರವಾಸಿಗರಿಗೆ ಪ್ರವೇಶಾವಕಾಶವಿರುವುದರಿಂದ ನೀವು ಇಲ್ಲಿ ಸುತ್ತಾಡಬಹುದು. ಆದರು ಈ ಉದ್ಯಾನವನದ ಕೆಲವು ಭಾಗಗಳಲ್ಲಿ ಹೊಸ ಪ್ರಭೇದಗಳು ಕಾಣ ಸಿಗುವ ಅವಕಾಶ ಈಗಲೂ ಇದೆ.

ಈ ಉದ್ಯನವನದಲ್ಲಿ ಓಕ್, ದೇವದಾರು, ಬಿರ್ಚ್, ಮ್ಯಾಪಲ್ ಮತ್ತು ವಿಲ್ಲೋ ಮರಗಳನ್ನು ನಾವು ನೋಡಬಹುದು. ಇಲ್ಲಿನ ಎತ್ತರದ ಪ್ರದೇಶಗಳಲ್ಲಿ ಔಷಧೀಯ ಸಸ್ಯಗಳ ಜೊತೆಗೆ ಅಲ್ಪೈನ್ ಹುಲ್ಲುಗಳನ್ನು ಮತ್ತು ಪೊದೆಗಳನ್ನು ನಾವು ನೋಡಬಹುದು. ಇದರ ಜೊತೆಗೆ  ಈ ಉದ್ಯಾನವನದಲ್ಲಿ ರಕ್ತ ವರ್ಣದ ಪೆಸಂಟ್ ( ನವಿಲು ಜಾತಿಯ ಹಕ್ಕಿ), ಸಟ್ಯೆ ಟ್ರಗೊಪನ್, ಒಸ್ಪ್ರೆ, ಹಿಮಾಲಯನ್ ಗ್ರಿಪ್ಫನ್, ಲಮ್ಮೆರ್ಜಿಯರ್ ಮತ್ತು ಟ್ರಗೊಪನ್ ಪೆಸೆಂಟ್‍ನಂತಹ ಹಕ್ಕಿಗಳನ್ನು ನಾವು ನೋಡಬಹುದು.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri

Near by City