Search
  • Follow NativePlanet
Share

ಕನತಲ್ - ಒಂದು ಸಖತ್ ಕೂಲ್ ಸ್ಪಾಟ್!

9

ಚಂಬಾ-ಮಸ್ಸೂರಿ ಹೆದ್ದರಿಯ ಮೇಲೆ ನೆಲೆಸಿರುವ ಉತ್ತರಾ ಖಂಡದ ತೆಹ್ರಿ ಗಡ್ವಾಲ್ ಜಿಲ್ಲೆಯಲ್ಲಿರುವ ಒಂದು ಪುಟ್ಟ ಗ್ರಾಮ ಕನತಾಲ್.ಈ ಸುಂದರ ಗ್ರಾಮ ಸಮುದ್ರ ಮಟ್ಟದಿಂದ 8500 ಅಡಿ ಎತ್ತರದಲ್ಲಿದೆ. ಇದರ ಸುತ್ತಮುತ್ತಲಿರುವ ಸ್ಥಳಗಳ ನಿವಾಸಿಗಳಿಗೆ ಇದೊಂದು ವಾರಾಂತ್ಯದ ರಜೆ ಕಳೆಯಲು ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿನ ಸುತ್ತಲಿನ ಹಚ್ಚ ಹಸಿರು, ಹಿಮದ ರಾಶಿಯನ್ನು ಹೊದ್ದುಕೊಂಡಿರುವ ಬೆಟ್ಟಗಳು, ನದಿಗಳು ಹಾಗೂ ಸುಂದರವಾದ ಹಸಿರು ಕಾನನ ಒಟ್ಟಾರೆಯಾಗಿ ಇದರ ಪ್ರಕೃತಿ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

ಒಂದಾನೊಂದು ಕಾಲದಲ್ಲಿ ಇಲ್ಲಿದ್ದ ಕನತಲ್ ಎಂಬ ಸರೋವರದಿಂದ ಈ ಗ್ರಾಮಕ್ಕೆ ಈ ಹೆಸರು ಬಂದಿದೆ, ಆದರೆ ಈಗ ಈ ಸರೋವರ ಇಲ್ಲಿಲ್ಲ. ಗ್ರಾಮದ ಅನೇಕ ಆಕರ್ಷಣೆಗಳಲ್ಲಿ ಸುರ್ಖಂಡಾ ದೇವಿ ದೇವಸ್ಥಾನ ಬಹಳ ಹೆಸರುವಾಸಿಯಾದದ್ದು. ಪುರಾಣ ಕಥೆಗಳ ಪ್ರಕಾರ, ದೇವಿ ಸತಿಯ ದೇಹವನ್ನು ಶಿವನು ಕೈಲಾಸಕ್ಕೆ ಹೊತ್ತು ಹೋಗುತ್ತಿರುವಾಗ ಇದೇ ಸ್ಥಳದಲ್ಲಿ ದೇವಿಯ ಶಿರ ಬಿದ್ದಿತ್ತೆನ್ನಲಾಗಿದೆ. ಹೀಗೆ ಸತಿಯ ದೇಹದ ವಿವಿಧ ಭಾಗಗಳು ಬಿದ್ದ ಸ್ಥಳಗಳೆಲ್ಲವು 'ಶಕ್ತಿ ಪೀಠಗಳು' ಆಗಿ ರೂಪಗೊಂಡಿವೆ. ಅವುಗಳಲ್ಲಿ ಸುರ್ಖಂಡಾ ದೇವಿ ದೇವಸ್ಥಾನವೂ ಒಂದಾಗಿದೆ. ಪ್ರತಿ ವರ್ಷ ಮೇ ಹಾಗೂ ಜೂನ್ ತಿಂಗಳಲ್ಲಿ ಇಲ್ಲಿ ಗಂಗಾ ದಸರಾ ಹಬ್ಬವನ್ನು ಅದ್ದೂರಿಯಾಗಿ ನಡೆಸಲಾಗುತ್ತದೆ.

ಕನತಾಲ್ ಗ್ರಾಮದಲ್ಲಿರುವ ತೆಹ್ರಿ ಡ್ಯಾಮ್ ಇಡೀ ವಿಶ್ವದಲ್ಲೇ ಅತ್ಯಂತ ಎತ್ತರದ ಪ್ರದೇಶದಲ್ಲಿರುವ ಡ್ಯಾಮ್ ಎಂಬ ಖ್ಯಾತಿಯನ್ನು ಹೊಂದಿದೆ. ಈ ಡ್ಯಾಮ್ ಅನ್ನು ಭಾಗೀರಥಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದು ಸುತ್ತಲಿನ ಎಲ್ಲಾ ಗ್ರಾಮಗಳಿಗೂ ಇಲ್ಲಿಂದಲೇ ನೀರು ಸರಬರಾಜು ಮಾಡಲಾಗುತ್ತದೆ. ಇಲ್ಲಿಂದ ಸ್ವಲ್ಪ ದೂರ ನಡೆದು ಹೋಗುವುದಾದರೆ ಕೋಡಿಯಾ ಜಂಗಲ್ ಸಿಗುತ್ತದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಅಧಿಕವಾಗಿದೆ. ಇಲ್ಲಿನ ಪ್ರಕೃತಿ ತಾಣದಲ್ಲಿ ಟ್ರೆಕ್ಕಿಂಗ್ ಮಾಡುವಾಗ ಪ್ರಾಕೃತಿಕ ಜಲ ಬುಗ್ಗೆಗಳನ್ನು ಕಾಣಬಹುದು. ಕಾಡಿನಲ್ಲಿ ಬಾರ್ಕಿಂಗ್ ಡೀರ್, ಕಾಡು ಹಂದಿ ಹಾಗೂ ಮಸ್ಕ್ ಡೀರ್ ಗಳು ಮಾರ್ಗದ ಉದ್ದಕ್ಕೂ ನೋಡಲು ಕಾಣಸಿಗುತ್ತವೆ.

ದೇಶದ ವಿವಿಧ ಭಾಗಗಳಿಂದ ಇಲ್ಲಿಗೆ ರಸ್ತೆ, ರೈಲು ಹಾಗೂ ವಿಮಾನ ಮಾರ್ಗದ ಸಂಪರ್ಕವಿದೆ. ಡೆಹರಾಡೂನ್ ನಗರದ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಕನಾತಾಲ್ ಗ್ರಾಮಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇದು ಇಲ್ಲಿಂದ 92 ಕಿ.ಮೀ.ದೂರದಲ್ಲಿದೆ. ಡೆಹರಾಡೂನ್ ಹಾಗೂ ರಿಷಿಕೇಶ್ ರೈಲು ನಿಲ್ದಾಣಗಳು ಇಲ್ಲಿಗೆ ಹತ್ತಿರದ ರೈಲು ನಿಲ್ದಾಣಗಳಾಗಿವೆ. ಸಮೀಪದ ಮುಸ್ಸೂರಿ, ರಿಷಿಕೇಶ್, ಚಂಬಾ, ಡೆಹರಾಡೂನ್, ಹರಿದ್ವಾರ್ ಹಾಗೂ ತೆಹ್ರಿ ನಗರಗಳಿಂದ ಕನತಾಲ್ ಗ್ರಾಮಕ್ಕೆ ಲಕ್ಸುರಿ ಹಾಗೂ ಸೆಮಿ ಲಕ್ಸುರಿ ಬಸ್ಗುಗಳ ಸೇವೆ ಸದಾಕಾಲ ಲಭ್ಯವಿದೆ.

ಕನತಾಲ್ ಗ್ರಾಮಕ್ಕೆ ಭೇಟಿ ನೀಡಲು ಬೇಸಿಗೆ ಹಾಗೂ ಚಳಿಗಾಲ ಸೂಕ್ತವಾಗಿದ್ದು ಈ ಸಮಯಗಳಲ್ಲಿ ಪ್ರವಾಸಿಗರು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಬಹುದಾಗಿದೆ.

ಕನತಲ್ ಪ್ರಸಿದ್ಧವಾಗಿದೆ

ಕನತಲ್ ಹವಾಮಾನ

ಉತ್ತಮ ಸಮಯ ಕನತಲ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕನತಲ್

  • ರಸ್ತೆಯ ಮೂಲಕ
    ಪ್ರವಾಸಿಗರು ಡೆಹರಾಡೂನ್, ರಿಷಿಕೇಶ್, ಹರಿದ್ವಾರ್, ತೆಹ್ರಿ, ಚಂಬಾ ಹಾಗೂ ಮುಸ್ಸೂರಿ ನಗರಗಳಿಂದ ರಸ್ತೆ ಮಾರ್ಗದ ಮೂಲಕ ಕನಾತಾಲ್ ಗ್ರಾಮವನ್ನು ತಲುಪಬಹುದಾಗಿದೆ. ಹವಾನಿಯಂತ್ರಿತ ವಾಹನಗಳು ಹಾಗೂ ಲಕ್ಸುರಿ, ಸೆಮಿ ಲಕ್ಸುರಿ ಬಸ್ಸುಗಳು ಲಭ್ಯವಿವೆ. ನವದೆಹಲಿಯಿಂದ ಮುಸ್ಸೂರಿ, ರಿಷಿಕೇಶ್ ಹಾಗೂ ಚಂಬಾ ನಗರಗಳಿಗೆ ಅಂತರರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಸಂಚರಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಡೆಹರಾಡೂನ್ ಹಾಗೂ ರಿಷಿಕೇಶ್ ನಗರದ ರೈಲು ನಿಲ್ದಾಣಗಳು ಇಲ್ಲಿಗೆ ಸಮೀಪದ ರೈಲು ನಿಲ್ದಾಣಗಳಾಗಿದ್ದು ಇವುಗಳು ಕ್ರಮವಾಗಿ 85 ಹಾಗೂ 75 ಕಿ.ಮೀ.ಗಳ ಅಂತರದಲ್ಲಿವೆ. ಡೆಹರಾಡೂನ್ ರೈಲು ನಿಲ್ದಾಣದಿಂದ ದೆಹಲಿ, ಮುಂಬೈ, ಅಲಹಬಾದ್, ವಾರಣಾಸಿ, ಗೋರಕ್ ಪುರ್, ಉಜೈನಿ, ಇಂದೋರ್, ಅಮೃತ್ ಸರ್ ಹಾಗೂ ಚೆನೈ ನಗರಗಳಿಗೆ ಹೆಚ್ಚಾಗಿ ರೈಲು ಸಂಚರಿಸುತ್ತದೆ. ಪ್ರವಾಸಿಗರು ಇಲ್ಲಿಂದ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ಕನತಾಲ್ ಗ್ರಾಮವನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಡೆಹರಾಡೂನ್ ನಗರದ ಜಾಲಿ ಗ್ರಾಂಟ್ ವಿಮಾನ ನಿಲ್ದಾಣವು ಕನತಲ್ ಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇದು ಸುಮಾರು 92 ಕಿ.ಮೀ.ದೂರದಲ್ಲಿದೆ. ಈ ನಿಲ್ದಾಣವು ದೇಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನಗಳ ಮೂಲಕ ಸಂಪರ್ಕ ಹೊಂದಿದೆ. ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳ ಮೂಲಕ ಕನತಾಲ್ ಗ್ರಾಮವನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri