ಗಡ್ ಮಂದಾರಣ್ ಒಂದು ಪುರಾತನ ಕೋಟೆಯಾಗಿದ್ದು, ದುರದೃಷ್ಟವಶಾತ್ ಇಂದು ಪಾಳು ಬಿದ್ದಿದೆ. ವಿಶೇಷವೆಂದರೆ ಇದು ಅಫ್ಘನ್ ಮೂಲದ ಕೋಟೆಯಾಗಿದೆ. ಇದರ ವಿವಾದಾತ್ಮಕ ಐತಿಹಾಸಿಕ ಮಾಹಿತಿ ಹಾಗು ಪುರಾತತ್ವ ದಾಖಲೆಗಳು ಪ್ರವಾಸಿಗರನ್ನು ಸೆಳೆಯುವಂತೆ ಮಾಡಿದೆ.
ಈ ಕೋಟೆ ನೆಲೆಸಿರುವ ಪ್ರದೇಶವು ಕಲುಷಿತಗೊಳ್ಳದೆ ಇರುವುದರಿಂದ, ಮಧ್ಯಾಹ್ನ ಹಾಗು ಸಂಜೆಯ ಸಮಯವನ್ನು ಕುಟುಂಬ ಸಮೇತ ಕಳೆಯಲು ಇದೊಂದು ಆದರ್ಶ ತಾಣವಾಗಿದೆ. ಚಿತ್ರಗಳನ್ನು ಸೆರೆಹಿಡಿಯಲು ಕೂಡ ಇದೊಂದು ಉತ್ತಮ ಸ್ಥಳವಾಗಿದೆ.