Search
  • Follow NativePlanet
Share

ಸಾಹಸಕ್ಕೆ ಸೈ : ಕಲ್ಸಿ

21

ವರ್ಷದ ಯಾವುದೇ ತಿಂಗಳಿನಲ್ಲಾದರೂ ಸರಿ ರಜಾ ದಿನಳನ್ನು ಕಳೆಯಲು, ವಿಶ್ರಾಂತಿ ಪಡೆಯಲು ಇಷ್ಟಪಡುವಿರಾದರೆ ಅದಕ್ಕೆ ಸೂಕ್ತವಾದ ಸ್ಥಳ ಉತ್ತರಾಖಂಡದ ಕಲ್ಸಿ ಪ್ರವಾಸಿ ತಾಣ. ಇದು ಸಾಹಸಮಯ ಚಟುವಟಿಕೆಗಳನ್ನು ಮಾಡಲು ಇಷ್ಟ ಪಡುವ ವ್ಯಕ್ತಿಗಳಿಗೆ ಪ್ರಶಸ್ತವಾದ ಸ್ಥಳ. ಈ ಸುಂದರ ನೈಸರ್ಗಿಕ ತಾಣದ ಬಗ್ಗೆ ಸಂಕ್ಷಿಪ್ತವಾದ ವರದಿಯೊಂದು ಇಲ್ಲಿದೆ. 

ಕಲ್ಸಿ, ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯಲ್ಲಿದೆ. ಇದು ಸಮುದ್ರ ಮಟ್ಟದಿಂದ 780 ಮೀಟರ್ ಎತ್ತರದಲ್ಲಿರುವ ಒಂದು ಸುಂದರ ಪ್ರವಾಸಿ ತಾಣವಾಗಿದೆ. ಜುನ್ಸರ್ - ಬವಾರ್ ಬುಡಕಟ್ಟು ಪ್ರದೇಶಕ್ಕೆ ಗೇಟ್ವೇಯಂತೆ ಇರುವ ಈ ಸ್ಥಳ, ಯಮುನಾ ಮತ್ತು ಟನ್ಸ್ ನದಿಗಳ ಸಂಗಮ ಸ್ಥಳದಲ್ಲಿದೆ. ಈ ಸ್ಥಳವು ಹಲವಾರು ಪುರಾತನ ಸ್ಮಾರಕಗಳು, ಸಾಹಸ ಕ್ರೀಡೆ ಮತ್ತು ಪಿಕ್ನಿಕ್ ತಾಣಗಳಿಗೆ ಪ್ರಸಿದ್ಧವಾಗಿದೆ. ಭಾರತೀಯ ಶಾಸನಶಾಸ್ತ್ರ ಇತಿಹಾಸದಲ್ಲಿ ಪ್ರಮುಖ ಸ್ಮಾರಕವಾದ ಅಶೋಕನ ಶಿಲಾ ಶಾಸನ ಕಲ್ಸಿಯ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಮೌರ್ಯ ರಾಜ, ಅಶೋಕನ ಹದಿನಾಲ್ಕನೇ ರಾಜಶಾಸನವಾಗಿದ್ದು, ಕ್ರಿ. ಶ. ಪೂ 253 ರಲ್ಲಿ ಕೆತ್ತಲಾಗಿದೆ. ರಾಜನ ಸುಧಾರಣೆಗಳು ಮತ್ತು ಸಲಹೆಗಳನ್ನು ರಾಜನ ಆದೇಶದ ಮೇರೆಗೆ, ಪ್ರಾಕೃತ ಭಾಷೆ ಮತ್ತು ಬ್ರಾಹ್ಮಿ ಭಾಷೆಯಲ್ಲಿ ಕೆತ್ತಲಾಗಿದೆ. ಇದರ ರಚನೆಯ ಎತ್ತರ ಮತ್ತು ಅಗಲ ಕ್ರಮವಾಗಿ 10 ಅಡಿ ಮತ್ತು 8 ಅಡಿಗಳು.

ಅಲ್ಲದೆ, ಪ್ರವಾಸಿಗರು ವಿವಿಧ ಅಳಿವಿನಂಚಿನಲ್ಲಿರುವ ಪಕ್ಷಿಗಳ ವಲಸೆ ಸ್ಥಳ ಎಂದು ಕರೆಯಲ್ಪಡುವ ಅಸನ ಆಣೆಕಟ್ಟಿಗೆ ಭೇಟಿ ನೀಡಬಹುದು. ಐಯುಸಿಎನ್ ರೆಡ್ ಡಾಟಾ ಬುಕ್ (ಪ್ರಕೃತಿ ಸಂರಕ್ಷಣೆಗಾಗಿ ಅಂತಾರಾಷ್ಟ್ರೀಯ ಒಕ್ಕೂಟ) ಇಲ್ಲಿರುವ ಪಕ್ಷಿಗಳು ಅಪರೂಪದ ಜಾತಿಯ ಪಕ್ಷಿಗಳು ಎಂದು ಘೋಷಿಸಿದೆ. ಹುರುಪಿರುವ ಪಕ್ಷಿವೀಕ್ಷಕರು ಅಥವಾ ಪ್ರಿಯರು ಇಲ್ಲಿ ಅನೇಕ ರೀತಿಯ ಪಕ್ಷಿಗಳ ಅದ್ಭುತ ಕ್ಷಣಗಳನ್ನು ಆನಂದಿಸಬಹುದು. ಕೆಂಪು ಜುಟ್ಟುಳ್ಳ ಪೋಚರ್ಡ್, ರೂಡಿ, ಕೂಟ್ಸ್, ಕಡಲು, ಬೆಳ್ಳಕ್ಕಿಗಳು, ವ್ಯಾಗ್, ಕೊಳದ ಬಕಗಳು, ಪಲ್ಲಾಸ್ ಮೀನುಗಾರಿಕೆ ಹದ್ದುಗಳು, ಡೇಗೆ, ಹೆಚ್ಚಿನ ಮಚ್ಚೆಯುಳ್ಳ ಗರುಡಗಳು, ಆಸ್ಪ್ರೇಸ್ ಮತ್ತು ಹುಲ್ಲುಗಾವಲಿನ ಹದ್ದುಗಳಂತಹ ವಿವಿಧ ಅನನ್ಯ ಜಾತಿಯ ಪಕ್ಷಿಗಳ ವೀಕ್ಷಣೆಯೊಂದಿಗೆ ಅದ್ಭುತ ಕ್ಷಣಗಳನ್ನು ಕಳೆಯಬಹುದು. ಪ್ರವಾಸಿಗರು ಇಲ್ಲಿ ಅಕ್ಟೋಬರ್ ನಿಂದ ನವೆಂಬರ್ ಹಾಗೂ ಫೆಬ್ರವರಿಯಿಂದ ಮಾರ್ಚ್ ತಿಂಗಳುಗಳಲ್ಲಿ ವಲಸೆಬರುವ ಶೇ. 90 ನೀರುಹಕ್ಕಿಗಳ ಜೊತೆಗೆ 11 ಜಾತಿಗಳ ಪಕ್ಷಿಗಳನ್ನು ಕಾಣಬಹುದು.

ವಿಕಾಸ್ ನಗರ, ಕಲ್ಸಿಯಲ್ಲಿ ಶಾಪಿಂಗ್ ಹೋಗಲು ಒಂದು ಸೂಕ್ತವಾದ ತಾಣ. ಡಾಕ್ ಪತ್ಥರ್ ಮತ್ತೊಂದೆಡೆ ಕ್ಯಾನೋಯಿಂಗ್, ಬೋಟಿಂಗ್, ವಾಟರ್ ಸ್ಕೀಯಿಂಗ್, ಹಾಯಿ ಮತ್ತು ಹೋವರ್ಕ್ರಾಫ್ಟ್ ಮುಂತಾದ ವಿವಿಧ ಮನರಂಜನಾ ಚಟುವಟಿಕೆಗಳನ್ನು ಪ್ರವಾಸಿಗರಿಗೆ ಒದಗಿಸುವ ಒಂದು ಸುಂದರ ಪಿಕ್ನಿಕ್ ತಾಣವಾಗಿದೆ. ಈ ಸ್ಥಳದಲ್ಲಿ ಯಮುನಾ ನದಿಯ ಶುದ್ಧವಾದ ನೀರಿನ ಮೇಲೆ ರಾಫ್ಟಿಂಗ್ ಅನ್ನು ಕೂಡ ಆನಂದಿಸಬಹುದು. ಸಿಹಿನೀರಿನ ಮೀನುಗಾರಿಕೆ ಕೂಡ ಸೆಪ್ಟೆಂಬರ್ ತಿಂಗಳಿಂದ ಅಕ್ಟೋಬರ್ ಮತ್ತು ಮಾರ್ಚ್ ತಿಂಗಳಿನಿಂದ ಏಪ್ರಿಲ್ ನಲ್ಲಿ ಖಾಸಗಿ ರೆಸಾರ್ಟ್ ಗಳಿಂದ ಇಲ್ಲಿ ಯೋಜಿಸಲಾಗಿರುತ್ತದೆ.

ತಿಮಲಿ ಪಾಸ್, ಕತ್ತಾ ಪತ್ಥರ್ ಮತ್ತು ಚಕ್ರತಾ ಕೂಡ ಅತ್ಯಂತ ಮೌಲ್ಯಯುತವಾದ ಭೇಟಿ ನೀಡುವ ಆಕರ್ಷಣೀಯ ಸ್ಥಳ. ಕಲ್ಸಿಗೆ ಅತ್ಯಂತ ನಿಕಟವಾದ ವಿಮಾನ ನಿಲ್ದಾಣ, ಕಲ್ಸಿಯಿಂದ  73 ಕಿ. ಮೀ ದೂರದಲ್ಲಿರುವ ಡೆಹ್ರಾಡೂನ್ ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ. ಪ್ರವಾಸಿಗರು ಡೆಹ್ರಾಡೂನ್ ನಿಂದ ರೈಲಿನಲ್ಲಿ ಈ ಸ್ಥಳವನ್ನು ತಲುಪಬಹುದು. ಕಲ್ಸಿಗೆ ದೆಹಲಿ ಸೇರಿದಂತೆ ಹತ್ತಿರದ ನಗರಗಳಿಂದ ಬಸ್ ಗಳು ಲಭ್ಯವಿದೆ. ಕಲ್ಸಿಗೆ ಪ್ರಯಾಣ ಬೆಳೆಸುವ ಯೋಜನೆಯಿರುವ ಪ್ರವಾಸಿಗರು ಬೇಸಿಗೆ ಕಾಲದಲ್ಲಿ ಈ ಸ್ಥಳಕ್ಕೆ ಭೇಟಿ ನೀಡುವುದು ಸೂಕ್ತ.

ಕಲ್ಸಿ ಪ್ರಸಿದ್ಧವಾಗಿದೆ

ಕಲ್ಸಿ ಹವಾಮಾನ

ಉತ್ತಮ ಸಮಯ ಕಲ್ಸಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕಲ್ಸಿ

  • ರಸ್ತೆಯ ಮೂಲಕ
    ರಾಜ್ಯ ಸ್ವಾಮ್ಯದ ಬಸ್ಸುಗಳು, ಡೆಹ್ರಾಡೂನ್ ಸೇರಿದಂತೆ ಹತ್ತಿರದ ನಗರಗಳಿಂದ ಕಲ್ಸಿಗೆ ಲಭ್ಯವಿದೆ. ದೆಹಲಿಯಿಂದ ನಿಯಮಿತವಾಗಿ ಸಂಚರಿಸುವ ಐಷಾರಾಮಿ ಪ್ರವಾಸಿ ಬಸ್ ಗಳು ಕೂಡ ಕಲ್ಸಿಗೆ ಸಂಪರ್ಕ ಕಲ್ಪಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕಲ್ಸಿಗೆ ಹತ್ತಿರದ ರೈಲ್ವೆ ನಿಲ್ದಾಣವು 49 ಕಿ. ಮೀ ದೂರದಲ್ಲಿರುವ ಡೆಹ್ರಾಡೂನ್ ರೈಲ್ವೆ ನಿಲ್ದಾಣವಾಗಿದೆ. ಪ್ರಮುಖ ನಗರಗಳಿಗೆ ಆಗಾಗ್ಗೆ ರೈಲುಗಳು ಈ ನಿಲ್ದಾಣದಿಂದ ಲಭ್ಯವಿದೆ. ಈ ನಿಲ್ದಾಣದಿಂದ ಕಲ್ಸಿಗೆ ಬಾಡಿಗೆ ಟ್ಯಾಕ್ಸಿಗಳ ಮೂಲಕ ಪ್ರಯಾಣ ಮಾಡಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಡೆಹ್ರಾಡೂನ್ ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣ, ನಗರ ಕೇಂದ್ರದಿಂದ 73 ಕಿ. ಮೀ ದೂರದಲ್ಲಿರುವ ಹತ್ತಿರದ ವಾಯುನೆಲೆಯಾಗಿ ಕಾರ್ಯನಿರ್ವಹಿಸುತ್ತದೆ. ದೆಹಲಿಯ ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೈನಂದಿನ ವಿಮಾನಗಳ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ. ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಿಂದ ಕಲ್ಸಿಗೆ ಟ್ಯಾಕ್ಸಿಗಳ ಮೂಲಕ ಹೋಗಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat