ಆಕರ್ಷಕ ವಾಸ್ತುಶಿಲ್ಪ ಹಾಗೂ ವಿಶಿಷ್ಟ ಕೆತ್ತನೆಯ ಕಲಾತ್ಮಕ ಕಂಬಗಳಿಂದ ಪುಲಿಯಾರಮಲಾ ಜೈನ್ ದೇವಾಲಯ ಜನಪ್ರಿಯವಾಗಿದೆ. ಜೈನ ಸಮುದಾಯದ ಅತ್ಯಂತ ಜನಪ್ರಿಯ ಸಂತ ಅನಂತಾನಂತ ಸ್ವಾಮಿಯ ಭಕ್ತಿಗೆ ನಿರ್ಮಿಸಿದ್ದಾಗಿದೆ. ಕಲ್ಪೆಟ್ಟಾದಿಂದ ಆರು ಕಿ.ಮೀ. ದೂರದಲ್ಲಿ ಈ ಜೈನ ದೇವಾಲಯ ಇದೆ. ಜೈನರ ಅತ್ಯಂತ ಶ್ರೇಷ್ಠ ಧಾರ್ಮಿಕ ಕೇಂದ್ರ ಇದಾಗಿದೆ. ಈ ದೇವಾಲಯ ಕಲಾ ಪ್ರೇಮಿಗಳಿಗೆ ಅತ್ಯಂತ ಅಪ್ಯಾಯಮಾನವಾಗಿ ಕಾಣಲಿದೆ. ಮುಖ್ಯ ಪ್ರವೇಶದ್ವಾರವು ಅತ್ಯಾಕರ್ಷಕ ಕುಸುರಿ ಕೆತ್ತನೆಗೆ ಒಳಪಟ್ಟಿದ್ದು, ಮೂರು ಪ್ಯಾನಲ್ಗಳನ್ನು ಒಳಗೊಂಡಿದೆ. ಹೊರ ದ್ವಾರದ ಬಳಿ ಅತ್ಯಾಕರ್ಷವಾಗಿ ಕೆತ್ತನೆ ಮಾಡಿದ ಗ್ರನೈಟ್ ಕಂಬಗಳು ಇವೆ. ದೇವಾಲಯವು ಸ್ತೂಪವನ್ನು ಕೂಡ ಒಳಗೊಂಡಿದೆ. ಸಾಂಪ್ರದಾಯಿಕ ಶೈಲಿಯಲ್ಲಿ ಈ ಸ್ತೂಪವನ್ನು ನಿರ್ಮಿಸಲಾಗಿದೆ. ಪಿರಮಿಡ್ ಮಾದರಿಯಲ್ಲಿ ಸಿದ್ಧಗೊಂಡಿರುವ ಈ ಸ್ತೂಪ ಆಕರ್ಷಕ ಕೆತ್ತನೆಯನ್ನು ಒಳಗೊಂಡಿದೆ. ಸ್ತೂಪದ ಕೊಟ್ಟ ಕೊನೆಯಲ್ಲಿ ಭಗವಾನ್ ಮಹಾವೀರ ಜೈನರ ಪ್ರತಿಮೆ ಕೂರಿಸಲಾಗಿದೆ. ದೇವಾಲಯದ ಮುಖ್ಯ ತುದಿಯು ಚಿಕ್ಕ ಚಿಕ್ಕ ಮೆಟ್ಟಿಲುಗಳನ್ನು ಒಳಗೊಂಡಿದೆ. ಪ್ರತಿಯೊಂದರ ಮೇಲೂ ಒಂದೊಂದು ಪ್ರತ್ಯೇಕ ಜೈನ ಮುನಿಗಳ ಶಿಲ್ಪ ಇರಿಸಲಾಗಿದೆ. ಇದನ್ನು ಅತ್ಯಂತ ಜಾಗರೂಕತೆಯಿಂದ ಆಯ್ಕೆ ಮಾಡಲಾಗಿದೆ. ಮುಂಬರುವ ಜೈನ್ ವಾಸ್ತುಶಿಲ್ಪಿಗಳಿಗೆ ಪುಲಿಯಾರಮಲಾ ಜೈನ್ ದೇವಾಲಯ ಅತ್ಯುಪಯುಕ್ತ ಮಾಹಿತಿ ಒದಗಿಸುವಲ್ಲಿ ಸಂಶಯವಿಲ್ಲ.