ಸಪ್ನಿ ಕೋಟೆ - ಅಪರೂಪದ ವಾಸ್ತು ಕಲಾಕೃತಿಗಳಿಗೆ ಪ್ರಸಿದ್ದವಾಗಿದ್ದು ಸಪ್ನಿ ಗ್ರಾಮದ ಸಾನ್ನಿಧ್ಯದಲ್ಲಿದೆ. ಎರಡು ಕಟ್ಟಡಗಳನ್ನು ಒಟ್ಟಿಗೆ ಸೇರಿಸಿ ಈ ಕೋಟೆಯನ್ನು ಕಟ್ಟಲಾಗಿದೆ. ಕಟ್ಟಡದ ಮುಖ್ಯ ಗೋಪುರ ಬಹಳ ಹಳೆಯದಾಗಿದ್ದು ಏಳು ಅಂತಸ್ತುಗಳನ್ನು ಹೊಂದಿದೆ. ಕಟ್ಟಡದ ಐದನೇ ಅಂತಸ್ತಿನಲ್ಲಿ ಕಾಳಿ ದೇವತೆಯ ದೇವಸ್ಥಾನವಿದೆ.
ಕಟ್ಟಡದ ಮುಂಭಾಗವನ್ನು ಕಟ್ಟಿಸಿದವನು ರಾಂಪುರದ ರಾಜಾ ಪದಮ್ ಸಿಂಗ್. ಬಾಗಿಲು ಮತ್ತು ಕಿಟಕಿಯ ಚೌಕಟ್ಟುಗಳಲ್ಲಿ ಸುಂದರವಾದ ಮರದ ಕೆತ್ತನೆಗಳನ್ನು ಪ್ರವಾಸಿಗರು ನೋಡಬಹುದು.