ಪ್ರತಿಷ್ಠಿತ ಮತ್ತು ಪ್ರಶಾಂತ ಇವು ಈ ಮಠವನ್ನು ವರ್ಣಿಸಲು ಬಳಸಬಹುದಾದ ಪದಗಳು. ಇಲ್ಲಿನ ಚಾಂಟಿಂಗ್ ಹಾಲ್ ನಿಶ್ಯಬ್ಧವಾಗಿದ್ದು ಪ್ರಶಾಂತ ವಾತಾವರಣವಿರುತ್ತದೆ. ಹಳೆಯ ಮಠಗಳ ವಾಸ್ತುಶೈಲಿಯನ್ನು ಹೊಂದಿರುವ ಈ ಮಠವು ಸೂಕ್ತನಿರ್ವಹಣೆಯಿಲ್ಲದೆ ಹಾಳಾಗಿದೆ. ಆದರೆ ಈ ಮಠವನ್ನು ಹೊಸದಾಗಿ ನಿರ್ಮಿಸಲಾಗಿದೆ. ಯುವ ಲಾಮಾಗಳು ಉತ್ಸಾಹದಿಂದ ಸುತ್ತಲಿನ ಪ್ರದೇಶವನ್ನು ಮತ್ತು ತಮ್ಮ ವಿಧಾನಗಳನ್ನು ನಿಮಗೆ ಪರಿಚಯಿಸುತ್ತಾರೆ. ಸೂರ್ಯಾಸ್ತದ ಸಮಯದಲ್ಲಿ ಈ ಮಠಕ್ಕೆ ಭೇಟಿ ನೀಡಿದರೆ ಸುಂದರ ಅವಿಸ್ಮರಣೀಯ ನೋಟವನ್ನು ಕಣ್ತುಂಬಿಕೊಳ್ಳಬಹುದು.