ತೀಸ್ತಾ ಬಜಾರ್ ತೀಸ್ತಾ ನದಿ ದಂಡೆಯಲ್ಲಿದೆ. ಇದು ಕಾಲಿಂಪಾಂಗ್ನಿಂದ ಕೆಲವೇ ಕಿಮೀ ದೂರದಲ್ಲಿದೆ. ಇಲ್ಲಿ ಒಳ್ಳೆಯ ಆಹಾರ, ಛಾಯಾಗ್ರಹಣಕ್ಕೆ ಸೂಕ್ತ ನೋಟ, ಸ್ವಚ್ಛ ವಾತಾವರಣ ಮತ್ತು ದುಬಾರಿಯಲ್ಲದ ಖರೀದಿ ಅವಕಾಶಗಳನ್ನು ಒದಗಿಸುತ್ತದೆ.
ತೀಸ್ತಾ ಬಜಾರಿನಲ್ಲಿ ಕೊಳ್ಳಬಹುದಾದ ವಸ್ತುಗಳೆಂದರೆ ಕಠಾರಿಗಳು, ಪಾದರಕ್ಷೆಗಳು ಮತ್ತು ಕಂದೀಲುಗಳು. ಇಲ್ಲಿ ಮಾರಟವಾಗುವ ವಸ್ತುಗಳೆಲ್ಲವೂ ಚೀನಾ, ಟಿಬೆಟ್ ಮತ್ತು ಭೂತಾನೀಸ್ ಪ್ರಭಾವವನ್ನು ಹೊಂದಿರುತ್ತವೆ. ರಿವರ್ ರ್ಯಾ ಫ್ಟಿಂಗ್ ಇಲ್ಲಿನ ಜನಪ್ರಿಯ ಕ್ರೀಡೆ, ಇಲ್ಲಿಂದಲೇ ತೀಸ್ತಾ ನದಿಯು ಪಶ್ಚಿಮ ಬಂಗಾಳಕ್ಕೆ ಹರಿಯುತ್ತದೆ. ಈ ಗಡಿ ಪ್ರದೇಶದಲ್ಲಿ ಭಾರತೀಯ ಸೇನೆಯು ಬೀಡು ಬಿಟ್ಟಿರುವುದನ್ನು ಕಾಣಬಹುದು.