ಹೆಸರೇ ಸೂಚಿಸುವಂತೆ, ಅಸುರ್ಗಡ್ ಒಂದು ಅಸುರರ ಕೋಟೆಯಾಗಿದ್ದು, ಇದು ಕಲಾಹಂಡಿಯ ಸಮೀಪವಿರುವ ನರ್ಲಾದಲ್ಲಿದೆ. ಈ ಪ್ರದೇಶವು ಒಂದು ಕಾಲದಲ್ಲಿ ಕ್ರಿ.ಪೂ. 500 ರಿಂದ ಕ್ರಿ. ಶ. 500 ರವರೆಗಿನ ಕಾಲಾವಧಿಯ ನಿವಾಸ ಸ್ಥಾನವಾಗಿದ್ದು, ಜನರು ಮುಖ್ಯವಾಗಿ ಪಟ್ಟಣವಾಸಿಗಳಾಗಿದ್ದರು ಮತ್ತು ನಾಗರೀಕತೆಯು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಆ ಕಾಲದಲ್ಲಿ ಈ ಪ್ರಾಂತವು ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರವಾಗಿತ್ತು. ಈ ಪ್ರದೇಶದಲ್ಲಿ ಅಸುರ್ಗಡ್ ಎಂದು ಕರೆಯಲ್ಪಡುವ 200 ಎಕರೆಗಳಷ್ಟು ವಿಸ್ತಾರವಾದ ಬೃಹತ್ ತೊಟ್ಟಿಯೊಂದಿದ್ದು, ಇದಕ್ಕೆ ಸಮೀಪವಿರುವ ಕೋಟೆಯೊಂದರ ಅವಶೇಷದ ರೋಮಾಂಚಕ ಸವಿಯನ್ನು ಆಸ್ವಾದಿಸಲು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.