ಭಬುವಾ ಕೈಮೂರ್ ನ ಒಂದು ಪ್ರಮುಖ ನಗರ. ಇದು ಐತಿಹಾಸಿಕವಾಗಿ ಬಹಳ ಮಹತ್ವ ಪಡೆದ ನಗರವಾಗಿದೆ. ಇದು ಶಾಹಾಬಾದ್ ನ ಒಂದು ಉಪನಗರವಾಗಿತ್ತು. ಇಲ್ಲಿನ ಏಕ್ತಾ ಚೌಕ್ ನಲ್ಲಿ ಮಹಾತ್ಮಾ ಗಾಂಧೀಜಿಯ ಪ್ರತಿಮೆಯನ್ನು ಕಾಣಬಹುದು. ಇದು ಮಾರುಕಟ್ಟೆ ವಲಯದ ಸಮೀಪದಲ್ಲೇ ಇದೆ. ಇಲ್ಲಿನ ಇತರೆ ಪ್ರಮುಖ ಸ್ಥಳಗಳೆಂದರೆ ಜಯಪ್ರಕಾಶ್ ಚೌಕ್ ಮತ್ತು ಅಶಭುಜಿ ಚೌಕ್.