ಕಡಪಾದಲ್ಲಿ 17ನೇ ಶತಮಾನದಲ್ಲಿ ನಿರ್ಮಾಣಗೊಂಡ ಅತ್ಯಾಕರ್ಷಕ ಮಸೀದಿ ಇದಾಗಿದೆ. ನಗರದ ಕೇಂದ್ರ ಭಾಗದಲ್ಲಿ ಇದನ್ನು ನೋಡಬಹುದಾಗಿದೆ. ಗಂಡಿಕೋಟಾ ಕೋಟೆಗೆ ಅತ್ಯಂತ ಸಮೀಪದಲ್ಲಿದೆ. ಮೊಘಲ್ ಚಕ್ರವರ್ತಿ ಔರಂಗಜೇಬ ಈ ಮಸೀದಿಯನ್ನು ನಿರ್ಮಿಸಿದ್ದಾನೆ ಎಂದು ಇತಿಹಾಸಕಾರರು ಹೇಳುತ್ತಾರೆ. ತನ್ನ ಆಳ್ವಿಕೆ ಇಲ್ಲಿದ್ದ ಸಂದರ್ಭದಲ್ಲಿ ಆತ ಈ ಮಸೀದಿ ನಿರ್ಮಿಸಿದ್ದ. ಮಸೀದಿಯ ಗೋಡೆ ಮೇಲಿರುವ ಒಂದು ಪರ್ಶಿಯನ್ ಬರಹದಲ್ಲಿ ಇದನ್ನು ಉಲ್ಲೇಖಿಸಲಾಗಿದೆ.
ಕಡಪಾ ಪಟ್ಟಣದ ಅತ್ಯಂತ ಜನಪ್ರಿಯ ಪ್ರದೇಶದಲ್ಲಿ ಈ ಮಸೀದಿಯೂ ಒಂದಾಗಿದೆ. ಮುಸ್ಲಿಂರು ನಿರಂತರವಾಗಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಇಲ್ಲಿ ಬಂದು ಅವರು ಪ್ರಾರ್ಥನೆ ಸಲ್ಲಿಸುತ್ತಾರೆ. ಇದು ಧಾರ್ಮಿಕ ಆಚರಣೆ ಮೂಲಕ ಪ್ರಸಿದ್ಧಿ ಸಾಧಿಸಿರುವ ಜತೆಗೆ ಇಲ್ಲಿನ ಅತ್ಯಾಕರ್ಷಕ ವಾಸ್ತುಶಿಲ್ಪದಿಂದಾಗಿಯೂ ಸಾಕಷ್ಟು ಜನರನ್ನು ಸೆಳೆಯುತ್ತದೆ. ಅಲ್ಲದೇ ನೋಡಲು ಅರ್ಹ ಸ್ಥಳ ಎನಿಸಿಕೊಂಡಿದೆ. ಮೊಘಲರ ಕಾಲದ ವಾಸ್ತುಶಿಲ್ಪ ಹಾಗೂ ವಿನ್ಯಾಸವನ್ನು ಗಮನದಲ್ಲಿಟ್ಟುಕೊಂಡು ಈ ಮಸೀದಿಯನ್ನು ನಿರ್ಮಿಸಲಾಗಿದೆ. ಅಲ್ಲದೇ ಈ ನಿರ್ಮಾಣದ ವಾಸ್ತುಶಿಲ್ಪಕ್ಕೆ ದೊಡ್ಡ ಪ್ರಮಾಣದಲ್ಲಿ ಪರ್ಶಿಯನ್ ಶೈಲಿಯನ್ನು ಬಳಸಿಕೊಳ್ಳಲಾಗಿದೆ. ಏಕೆಂದರೆ ಔರಂಗಜೇಬ ಪರ್ಶಿಯನ್ ಶೈಲಿಯನ್ನು ಅಪಾರವಾಗಿ ಬಳಸುತ್ತಿದ್ದ. ಇದೇ ಇಲ್ಲಿನ ನಿರ್ಮಾಣದಲ್ಲಿಯೂ ಪ್ರತಿಫಲಿಸುತ್ತದೆ. ಔರಂಗಜೇಬ ಉತ್ತರ ಭಾರತವನ್ನು ಆಳಿದ ಸಂದರ್ಭದಲ್ಲಿ ನಿರ್ಮಿಸಿದ ಮಸೀದಿಗಳ ಮಾದರಿಯನ್ನೇ ಇದು ಹೋಲುತ್ತಿರುವುದು ಇನ್ನೊಂದು ವಿಶೇಷ.