Search
  • Follow NativePlanet
Share
ಮುಖಪುಟ » ಸ್ಥಳಗಳು » ಕಡಪಾ » ಆಕರ್ಷಣೆಗಳು » ಚಾಂದ ಫಿರಾ ಗುಂಬದ್‌

ಚಾಂದ ಫಿರಾ ಗುಂಬದ್‌, ಕಡಪಾ

1

ಕಡಪಾ ಜಿಲ್ಲೆಯ ಚಾಂದ ಫಿರಾ ಗುಂಬದ್‌ ವು ಸೈಯ್ಯದ್‌ ಷಾ ಮೊಹಮ್ಮದ್‌ ಹುಸೇನಿಗೆ ಸೇರಿದ ಇಮಾರತು ಎಂದು ನಂಬಲಾಗುತ್ತದೆ. ನಗರ ಕೇಂದ್ರದಿಂದ ಬಲ ಭಾಗದಲ್ಲಿರುವ ಈ ಅಪರೂಪದ ಕಟ್ಟಡವನ್ನು ನೋಡದೇ ತೆರಳಲು ಸಾಧ್ಯವೇ ಇಲ್ಲ. ಇದರ ನಿರ್ಮಾಣ ಹಾಗೂ ವಿನ್ಯಾಸದಲ್ಲಿ ಬಳಸಿದ ತಂತ್ರಜ್ಞಾನ ಕಟ್ಟಡವನ್ನು ಅಪರೂಪದ್ದಾಗಿಸಿದೆ.

 

ಕಟ್ಟಡವು ಚೌಕಾಕಾರವಾಗಿ ನಿರ್ಮಾಣಗೊಂಡಿದೆ. ಕಟ್ಟಡದ ಮೇಲ್ಭಾಗದ ಮಧ್ಯೆ ದೊಡ್ಡ ಡೋಮ್‌ ಇದೆ. ಕಟ್ಟಡದ ಸುತ್ತಲೂ ದೊಡ್ಡ ಗೋಡೆ ಕಟ್ಟಲಾಗಿದೆ. ಇದು ಈ ಇಮಾರತ್ತಿಗೆ ರಕ್ಷಣೆ ಒದಗಿಸಲೆಂದು ನಿರ್ಮಿಸಲಾಗಿದೆ. ಕಟ್ಟಡವು ಅತ್ಯಾಕರ್ಷಕ ಕೆತ್ತನೆಯನ್ನು ಒಳಭಾಗ ಹಾಗೂ ಹೊರ ಭಾಗದ ಗೋಡೆಗೆ ಒಳಗೊಂಡಿದೆ. ಇಡೀ ಕಟ್ಟಡ ಅರೇಬಿಕ್‌ ಪ್ಲಾನ್‌ನಿಂದ ಸಿದ್ಧಗೊಂಡಿದೆ.

 

ಈ ಇಮಾರತ್ತು (ಕಟ್ಟಡ) ನಿಜಾಮರ ಕಾಲದ ಅತ್ಯಾಕರ್ಷಕ ವಾಸ್ತುಶಿಲ್ಪ ವಿನ್ಯಾಸಕ್ಕೆ ಉತ್ತಮ ಉದಾಹರಣೆಯಾಗಿ ಕಂಡು ಬರುತ್ತದೆ. ಈ ಪ್ರದೇಶದ ಸೌಂದರ್ಯ ಹಾಗೂ ದೊಡ್ಡ ಗೋಡೆ ನೋಡಲೆಂದೇ ಅನೇಕ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇನ್ನು ಕೆವರು ಕಟ್ಟಡದ ಒಳಭಾಗದ ಸೌಂದರ್ಯ ವೀಕ್ಷಣೆಗೆ ಆಗಮಿಸುತ್ತಾರೆ. ಈ ತಾಣ ಸ್ಥಳೀಯ ಮುಸ್ಲಿಂ ಜನಾಂಗದವರ ಪಾಲಿಗೆ ಅತ್ಯಂತ ಪ್ರಶಸ್ತ ತಾಣವಾಗಿ ಲಭಿಸಿದೆ.

One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed