ತನ್ನ ವಾಸ್ತುಶಿಲ್ಪ ಶೈಲಿಯಿಂದ ಜನಪ್ರಿಯಸ್ಥಳವಾದ ಮರಾಠರ ಮಹಾನ ರಾಜನಾದ ಛತ್ರಪತಿ ಶಿವಾಜಿಯ ಜನ್ಮಸ್ಥಳವೆಂಬ ಖ್ಯಾತಿ ಹೊಂದಿದ ಶಿವನೇರಿ ಕೋಟೆಯು ನಗರದ ಸನಿಹದಲ್ಲೇ ಇದೆ. ಶಿವಾಜಿಯು 1630 ರಲ್ಲಿ ಈ ಕೋಟಿಯಲ್ಲಿ ಜನಿಸಿದ್ದಲ್ಲದೇ, ಇಲ್ಲಿ ತನ್ನ ಯುದ್ಧ ತರಬೇತಿಯನ್ನೂ ಕೂಡ ಪಡೆದಿದ್ದನು.
ಮುಖ್ಯ ಕೋಟೆಯನ್ನು ಪ್ರವೇಶಿಸುವದಕ್ಕಿಂತ ಮೊದಲು ಏಳು ಮಹಾದ್ವಾರಗಳನ್ನು ದಾಟುವ ಆಲೋಚನೆಯೇ ಪ್ರವಾಸಿಗರಿಗೆ ಒಂದುರೀತಿಯ ಮುದವನ್ನುಂಟುಮಾಡುತ್ತದೆ. ಕೋಟೆಯ ಆವರಣದಲ್ಲಿ, ಸರಿಯಾಗಿ ಕೋಟೆಯ ಮಧ್ಯದಲ್ಲಿ ಬಾದಾಮಿ ತಲಾವ್ ಎಂಬ ನೀರಿನ ಸಣ್ಣ ಕೊಳವಿದೆ. ಶಿವಾಜಿಯ ತಾಯಿಯಾದ ಜೀಜಾಬಾಯಿ ಮತ್ತು ಶಿವಾಜಿಯ ವಿಗ್ರಹಗಳನ್ನು ಇಲ್ಲಿ ಕಾಣಬಹುದು.
ಕೋಟೆಯ ಹತ್ತಿರದಲ್ಲಿ ಶಿವಾನಿ ದೇವಿಯ ದೇವಾಲಯವಿದ್ದು, ಇದು ನೀವು ನೋಡಲೇ ಬೇಕಾದಂತಹ ದೇವಾಲಯವಾಗಿದೆ.