ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಜುನ್ನಾರ್ ಗುಹೆಗಳು ಮುಖ್ಯ ಪ್ರವಾಸಿ ಆಕರ್ಷಣೆಗಳಾಗಿವೆ. ಕ್ರಿಸ್ತಶಕ 2 ನೇ ಮತ್ತು 3 ನೇ ಶತಮಾನದ ಆಸುಪಾಸಿನಲ್ಲಿ ನಿರ್ಮಿತವಾದ ಈ ಗುಹೆಗಳು ಪುರಾತತ್ತ್ವಜ್ಞರು ಮತ್ತು ಈ ಗುಹೆಗಳ ಶಿಲ್ಪಗಳನ್ನು, ಚಿತ್ರಗಳನ್ನು ಅನ್ವೇಷಿಸಲು ಸ್ಥಳಕ್ಕೆ ಭೇಟಿ ನೀಡುವ ಇತಿಹಾಸ ಪ್ರಿಯರಲ್ಲಿ ಬಹಳ ಪ್ರಸಿದ್ಧವಾಗಿವೆ.
ಜುನ್ನಾರ್ ಗುಹೆಗಳನ್ನು ಮೂರು ಪ್ರಮುಖ ಭಾಗಗಳನ್ನಾಗಿ ವಿಂಗಡಿಸಲಾಗಿದ್ದು, ಅವು - ಮನ್ಮೊದಿ ಬೆಟ್ಟಗಳ ಗುಂಪು, ಗಣೇಶ್ ಲೆನಾ ಗುಂಪು ಮತ್ತು ತುಲಿಜಾ ಲೆನಾ ಗುಂಪು. ಮನ್ಮೊದಿ ಬೆಟ್ಟಗಳ ಗುಂಪುಗಳೆಂಬ ಗುಹೆಗಳು ತನ್ನದೇ ಹೆಸರನ್ನು ಹೊಂದಿರುವ ಬೆಟ್ಟಗಳ ಮೇಲಿದ್ದು, ತನ್ನ ಶಿಲ್ಪಕಲೆ ಮತ್ತು ವಿನ್ಯಾಸದಿಂದಾಗಿ ಜನಪ್ರಿಯವಾಗಿದೆ. ತುಲಜಾ ಲೆನಾ ಗುಂಪು ತನ್ನ ಅದ್ಭುತ ವೃತ್ತಾಕಾರದ ಗುಮ್ಮಟದಂತಹ ಛಾವಣಿಯಿಂದ ಹಾಗೂ ತನ್ನ ಚೈತ್ಯ ಪಡಸಾಲೆಯಿಂದ ಪ್ರಸಿದ್ಧವಾಗಿದೆ.
ಗಣೇಶ್ ಲೆನಾ ಗುಂಪು ಜುನ್ನಾರ್ ನಿಂದ ದಕ್ಷಿಣಕ್ಕೆ 4 ಕಿಮೀ ದೂರವಿದ್ದು, ವಿವಿಧ ವಿಹಾರಗಳನ್ನೂ ಮತ್ತು ಕೋಶಗಳನ್ನೂ ಒಳಗೊಂಡಿದೆ. ಆರನೇ ಚೈತ್ಯ ಗುಹೆ ಮತ್ತು ಗಣೇಶ್ ಲೆನಾ ಗುಹೆಗಳೆರಡೂ ಹೆಚ್ಚು ಜನಪ್ರಿಯವಾದವುಗಳಾಗಿವೆ.