Search
  • Follow NativePlanet
Share
ಮುಖಪುಟ » ಸ್ಥಳಗಳು » ಜುಬ್ಬಲ್ » ಹವಾಮಾನ

ಜುಬ್ಬಲ್ ಹವಾಮಾನ

ಜುಬ್ಬಲ್ ಅನ್ನು ನೋಡುವ ಆಸೆಯಿಂದಿರುವ ಪ್ರವಾಸಿಗರು ಏಪ್ರಿಲ್ ತಿಂಗಳಲ್ಲಿ ಯೋಜನೆ ಹಾಕಿಕೊಳ್ಳಬಹುದು. ಜೂನ್ ವರೆಗೂ ಇಲ್ಲಿಗೆ ಬರಬಹುದಾಗಿದೆ. ಬೇಸಿಗೆ ಮತ್ತು ವಸಂತಕಾಲ ಮಾತ್ರ ಇಲ್ಲಿಗೆ ಭೇಟಿ ನೀಡಲು ಶಿಪಾರಸು ಮಾಡಿದ ಉತ್ತಮ ಕಾಲಗಳಾಗಿವೆ.

ಬೇಸಿಗೆಗಾಲ

(ಎಪ್ರಿಲ್ನಿಂದ ಜೂನ್ ): ಜಬ್ಬಲ್ ನಲ್ಲಿ ಬೇಸಿಗೆ ಎಪ್ರಿಲ್ ನಲ್ಲಿ ಆರಂಭವಾಗಿ ಜೂನ್ ವರೆಗೂ ಇರುತ್ತದೆ. ಗರಿಷ್ಠ ತಾಪಮಾನ 28 ಡಿಗ್ರಿ ಸೆಂ. ಆಗಿದ್ದು ಕನಿಷ್ಠ 15 ಡಿಗ್ರಿ ಸೆ. ದಾಖಲಾಗುತ್ತದೆ.

ಮಳೆಗಾಲ

(ಜುಲೈನಿಂದ ಆಗಸ್ಟ್): ಜುಲೈನಲ್ಲಿ ಆರಂಭವಾಗುವ ಮಳೆಗಾಲ ಆಗಸ್ಟ್ ತಿಂಗಳಿನವರೆಗೂ ಮುಂದುವರೆಯುತ್ತದೆ. ಈ ಸಮಯದಲ್ಲಿ ಇಲ್ಲಿನ ವಾತಾವರಣದಲ್ಲಿನ ಆರ್ದ್ರತೆ ಹೆಚ್ಚಾಗಿರುತ್ತದೆ.

ಚಳಿಗಾಲ

(ನವೆಂಬರ್ನಿಂದ ಫೆಬ್ರವರಿ): ನವೆಂಬರ್ ತಿಂಗಳಲ್ಲಿ ಆರಂಭವಾಗುವ ಚಳಿಗಾಲ ಫೆಬ್ರವರಿ ತನಕವೂ ಮುಂದುವರಿಯುತ್ತದೆ. ಕನಿಷ್ಠ 4 ಡಿಗ್ರಿ ಸೆಂ. ನಿಂದ 15 ಡಿಗ್ರಿ ಸೆಂ ವರೆಗೆ ಇಲ್ಲಿನ ತಾಪಮಾನ ದಾಖಲಾಗುತ್ತದೆ. ಹಿಮಮಳೆಗಳು ಇಲ್ಲಿನ ಚಳಿಗಾಲದ ಸ್ವಭಾವ. ವಸಂತ ಕಾಲ(ಮಾರ್ಚ್): ಮಾರ್ಚ್ ತಿಂಗಳು ವಸಂತ ಕಾಲದ ಅವಧಿಯಾಗಿದ್ದು, ಈ ತಿಂಗಳಿನ ತಾಪಮಾನ 10 ರಿಂದ 20 ಡಿಗ್ರಿ ಸೆಂಟಿಗ್ರೇಡ್ ಗಳ ನಡುವೆ ದಾಖಲಾಗುತ್ತದೆ.