ಸಮುದ್ರ ಮಟ್ಟದಿಂದ 4260 ಮೀಟರ್ ಎತ್ತರದಲ್ಲಿರುವ ಚಂದರ್ ನಹಾನ್ ಸರೋವರ ಜುಬ್ಬಲ್ ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಪಬ್ಬಾರ್ ನದಿಯ ಉಗಮ ಸ್ಥಾನವೂ ಆಗಿದ್ದು, ಅನನ್ಯ ಪ್ರವಾಸಿ ಸಾಧ್ಯತೆಗಳ ಅನಾವರಣ ಇಲ್ಲಿದೆ. ಚಾನ್ಸಾಲ್ ಪರ್ವತದ ತಪ್ಪಲಿನಲ್ಲಿರುವ ಈ ಸರೋವರದ ಸುತ್ತಲಿನ ಪರ್ವತ ಸಾಲುಗಳಲ್ಲಿ ಸಾಹಸ ಚಾರಣಕ್ಕೆ ವಿಫುಲವಾದ ಅವಕಾಶವಿದೆ. ಮೀನುಗಾರಿಕೆಗೂ ಅವಕಾಶವಿರುವ ವಿಶಿಷ್ಟ ಅನುಭವ ನೀಡುವ ತಾಣ ಇದಾಗಿದೆ.