ಬುರಿಗೊಸೈನ್ ದೇವಾಲಯ ಜೋರ್ಹತ್ ನ ಪ್ರಸಿದ್ಧ ದೇವಾಲಯ. ನಗರದ ಮಧ್ಯಭಾಗದಲ್ಲಿರುವ ಈ ದೇವಾಲಯಕ್ಕೆ ಸುತ್ತಮುತ್ತಲಿನ ಹಾಗೂ ಪ್ರವಾಸಿಗಳು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಮಂದಿರದ ಆರಾಧ್ಯ ದೇವರು ಬುರಿಗೊಸೈನ್. ಮಂದಿರದಲ್ಲಿ ಅರ್ಚಕರೊಬ್ಬರ ಮೂರ್ತಿಯೂ ಇದೆ. ಈ ಮೂರ್ತಿಗಳನ್ನು ಜಯಂತಿಯಾದಿಂದ ತಂದು ರಂಗಪುರದಲ್ಲಿ ಮೊದಲು ಸ್ಥಾಪಿಸಲಾಯಿತು ಮತ್ತು ಬಳಿಕ ಈ ದೇವಾಲಯಕ್ಕೆ ತರಲಾಗಿದೆ ಎನ್ನುವ ನಂಬಿಕೆಯಿದೆ. ಅಹೋಮ್ ರಾಜರು ತಮ್ಮ ರಾಜಧಾನಿಯನ್ನು ಜೋರ್ಹತ್ ಗೆ ಸ್ಥಳಾಂತರಿಸಿದ ವೇಳೆ ಈ ಮೂರ್ತಿಗಳನ್ನು ರಂಗಪುರದಿಂದ ಜೋರ್ಹತ್ ಗೆ ತರಲಾಯಿತು. ಬುರಿಗೊಸೈನ್ ದೇವಾಲಯ ತಂತ್ರ ವಿದ್ಯೆಯಲ್ಲಿ ಪಳಗಿರುವ ಶಾಕ್ತ ಪಂಥಕ್ಕೆ ಮೀಸಲಾಗಿರುವ ದೇವಾಲಯ ಇದಾಗಿದೆ.
ನಗರದ ಮಧ್ಯಭಾಗದಲ್ಲಿರುವ ಬುರಿಗೊಸೈನ್ ಮಂದಿರಕ್ಕೆ ಭೇಟಿ ನೀಡುವುದು ತುಂಬಾ ಸುಲಭ. ಇದು ಜೋರ್ಹತ್ ನ ರೈಲು ನಿಲ್ದಾಣದ ಸಮೀಪವೇ ಇದೆ. ಪ್ರವಾಸಿಗರು ನಗರದ ಇತರ ಭಾಗದಲ್ಲಿ ತಂಗಿದ್ದರೆ ಅವರು ಅಟೋರಿಕ್ಷಾ ಅಥವಾ ಕಾರಿನ ಮೂಲಕ ದೇವಸ್ಥಾನಕ್ಕೆ ಪ್ರಯಾಣಿಸಬಹುದು.