Search
  • Follow NativePlanet
Share
ಮುಖಪುಟ » ಸ್ಥಳಗಳು » ಜೋಧಪುರ್ » ಆಕರ್ಷಣೆಗಳು » ಉಮೈದ್‌ ಭವನ್ ಅರಮನೆ

ಉಮೈದ್‌ ಭವನ್ ಅರಮನೆ, ಜೋಧಪುರ್

9

ಉಮೈದ್‌ ಭವನ್‌ ಅರಮನೆಗೆ ಈ ಹೆಸರು ಬಂದಿದ್ದು ಮಹಾರಾಜ ಉಮೈದ್‌ ಸಿಂಗ್ ಇದನ್ನು ನಿರ್ಮಿಸಿದ್ದರಿಂದಾಗಿ. ಈ ಸುಂದರ ಅರಮನೆಯು ಚಿತ್ತಾರ ಅರಮನೆ ಎಂದೂ ಜನಪ್ರಿಯವಾಗಿದೆ. ಇಲ್ಲಿಯ ಚಿತ್ತಾರ‍್ ಗುಡ್ಡದಿಂದ ಈ ನಾಮಧೇಯ ಬಂದಿದೆ. ಇದು ಇಂಡೋ-ಕೊಲೋನಿಯಲ್ ಶೈಲಿಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆ. ಆರ್ಟ್‌ ಡೆಕೋ ಎಂಬುದು ವಿಶಿಷ್ಟ ವಾಸ್ತುಶಿಲ್ಪ ಶೈಲಿಯಾಗಿದೆ. ಇದರ ಮೂಲವನ್ನು ಹುಡುಕಿ ಹೊರಟರೆ ಸುಮಾರು 1920 ರಿಂದ 1930 ರ ಕಾಲಕ್ಕೆ ಇದು ನಮ್ಮನ್ನು ಕೊಂಡೊಯ್ಯುತ್ತದೆ. ಈ ಕಟ್ಟಡವನ್ನು ಕಲ್ಲಿನಿಂದಲೇ ನಿರ್ಮಿಸಲಾಗಿದೆ. ಇದರ ವೈಶಿಷ್ಟ್ಯವೆಂದರೆ ಪ್ರತಿಯೊಂದು ಕಲ್ಲನ್ನೂ ಇನ್ನೊಂದು ಕಲ್ಲಿಗೆ ಕೊಂಡಿಯಾಗಿ ಬಳಸಲಾಗಿದೆ. ಇದರಿಂದಾಗಿ ಕಲ್ಲುಗಳನ್ನು ಸೇರಿಸಲು ಯಾವುದೇ ಪ್ರತ್ಯೇಕ ಸಾಮಗ್ರಿಯನ್ನು ಬಳಸಿಲ್ಲ. ಈ ವೈಶಿಷ್ಟ್ಯತೆಯನ್ನು ನೋಡಲೆಂದೇ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಾರೆ.

ಈ ಸುಂದರ ಅರಮನೆಯ ವಾಸ್ತುಶಿಲ್ಪಿ ಹೆನ್ರಿ ವಾಘನ್‌. ಈತ ಇಂಗ್ಲಿಷ್‌ ಪ್ರಜೆ. ಈ ಅರಮನೆಯ ಒಂದು ಭಾಗವನ್ನು ಹೋಟೆಲ್‌ ಆಗಿ ಪರಿವರ್ತಿಸಲಾಗಿದ್ದು, ಇನ್ನುಳಿದ ಪ್ರದೇಶವನ್ನು ಮ್ಯೂಸಿಯಂ ಮಾಡಲಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun