Search
  • Follow NativePlanet
Share
ಮುಖಪುಟ » ಸ್ಥಳಗಳು » ಝಾನ್ಸಿ » ಆಕರ್ಷಣೆಗಳು » ಮಹಾಲಕ್ಷ್ಮಿ ದೇವಸ್ಥಾನ

ಮಹಾಲಕ್ಷ್ಮಿ ದೇವಸ್ಥಾನ, ಝಾನ್ಸಿ

1

ಝಾನ್ಸಿ ನಗರದಲ್ಲಿ ಪ್ರಸಿದ್ಧವಾದ ಮಹಾಲಕ್ಷ್ಮಿ ದೇವಸ್ಥಾನವಿದ್ದು, ಇದು ಲಕ್ಷ್ಮಿ ದೇವತೆಗೆ ಸಮರ್ಪಿತವಾಗಿದೆ. ಈ ದೇವಾಲಯವು ಲಕ್ಷ್ಮಿ ದ್ವಾರದ ಹೊರಗಡೆ ಇದೆ. ಲಕ್ಷ್ಮಿ ದ್ವಾರವು ಲಕ್ಷ್ಮಿ ತಾಲದ ಹತ್ತಿರದಲ್ಲಿದೆ. ಈ ಭವ್ಯವಾದ ದೇವಾಲಯವನ್ನು 18 ನೇ ಶತಮಾನದಲ್ಲಿ ನಾವಲಕರ ಕುಟುಂಬದ ಎರಡನೇಯ ರಘುನಾಥ ರಾಯನು ನಿರ್ಮಿಸಿದನು. ಇವನು 1769 ರಲ್ಲಿ ವಿಶ್ವಾಸ ರಾವ ಲಕ್ಷ್ಮಣ ಇವರು ಅವನತಿ ಹೊಂದಿದ ಪರಿಣಾಮವಾಗಿ ಝಾನ್ಸಿಯ ಸುಬೇದಾರನಾಗಿ ನೇಮಕ ಹೊಂದಿದನು. ಝಾನ್ಸಿಯನ್ನು ಆಳಿದ ಹಿಂದು ದೊರೆಗಳು ಮತ್ತು ಝಾನ್ಸಿಯ ನಾಗರಿಕರು ಈ ಮಹಾಲಕ್ಷ್ಮಿ ದೇವಿಯ ಪರಮ ಭಕ್ತರಾಗಿದ್ದರು.

ಈ ದೇವಸ್ಥಾನಕ್ಕೂ ಮತ್ತು ರಾಣಿ ಲಕ್ಷ್ಮಿ ಬಾಯಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ಅವಳು ರಾಜಾ ಗಂಗಾಧರರಾವನನ್ನು ವಿವಾಹವಾಗುವುದಕ್ಕಿಂತ ಮುಂಚೆಯೇ ಇದನ್ನು ನಿರ್ಮಿಸಲಾಗಿತ್ತು. ತುಂಬಾ ಮನೋಹರವಾಗಿ ಕೆತ್ತಲಾಗಿರುವ ಈ ಪ್ರಾಚೀನ ದೇವಾಲಯವು ನಿರ್ಮಾಣವಾದಾಗಿನಿಂದ ಅನೇಕ ಐತಿಹಾಸಿಕ ವಿಪ್ಲವಗಳಿಗೆ ಸಾಕ್ಷಿಯಾಗಿದೆ. ಇದು ಕೇವಲ ಮಹಾಲಕ್ಷ್ಮಿ ದೇವಿಯ ಭಕ್ತರನ್ನು ಮಾತ್ರ ಆಕರ್ಷಿಸುವುದಿಲ್ಲ. ಬದಲಿಗೆ ಇತಿಹಾಸಕಾರರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇವರು ವರ್ಷ ಪೂರ್ತಿ ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.

ಇದು ಹಬ್ಬದ ಸಮಯದಲ್ಲಿ ವಿಶೇಷವಾಗಿ ದೀಪಾವಳಿಯ ಸಮಯದಲ್ಲಿ ಅಸಂಖ್ಯಾತ ಭಕ್ತರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ದೀಪಾವಳಿಯಂದು ಲಕ್ಷ್ಮಿ ಪೂಜೆಗೆ ವಿಶೇಷವಾದ ಸ್ಥಾನವಿದೆ. ಈ ದಿನ ಲಕ್ಷ್ಮಿ ಪೂಜೆಯ ಮಾಡಿದರೆ ಅವಳ ವಿಶೇಷ ಕೃಪೆಗೆ ಪಾತ್ರರಾಗಬಹುದು.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed