ಜೈನ ಶ್ವೇತಾಂಬರ ನಾಗೇಶ್ವರ ಪಾರ್ಶ್ವನಾಥ ದೇವಸ್ಥಾನವು ಝಾಲಾವರ್ ನ ದಕ್ಷಿಣ ಭಾಗದಲ್ಲಿದೆ. ಕೇಂದ್ರಭಾಗದಿಂದ ಸುಮಾರು 150 ಕಿ.ಮೀ ದೂರವಿದೆ. ದೇವಸ್ಥಾನವು ಪಾರ್ಶ್ವನಾಥನಿಗೆ ಸಮರ್ಪಿತವಾದದ್ದು. ಗುಜರಾತ್, ಮಹಾರಾಷ್ಟ್ರ ಮತ್ತು ಮಾಲ್ವಾ (ಮಧ್ಯಪ್ರದೇಶ)ದ ಜೈನ ಸಮುದಾಯ ಈ ದೇವಾಲಯವನ್ನು ನಿರ್ಮಿಸಿದೆ. ಪಾರ್ಶ್ವನಾಥನ ಈ ಮೂರ್ತಿಗೆ ಏನಿಲ್ಲವೆಂದರೂ 100 ವರ್ಷಗಳೇ ಸಂದಿವೆ. ಪ್ರವಾಸಿಗರು ಇಲ್ಲಿಗೆ ಬಂದರೆ ಆಹಾರವನ್ನು ಇಲ್ಲಿನ ಧರ್ಮಶಾಲೆಯಲ್ಲೇ ಸ್ವೀಕರಿಸಬಹುದು. ಬೆಲೆಯೂ ಕಡಿಮೆ..!