ಈ ಜಲಪಾತವು ಆಂಗ್ಲ ಅಕ್ಷರ 's' ಆಕಾರದಲ್ಲಿರುವುದರಿಂದ ಇದನ್ನು 's' ಜಲಪಾತವೆಂದೂ ಕರೆಯುತ್ತಾರೆ. ಈ ಜಲಪಾತದ ನೀರು 20 ಅಡಿಗಳಷ್ಟು ಎತ್ತರದಿಂದು ಧುಮುಕುತ್ತದೆ. ಈ ತಾಣದ ಸುತ್ತಲೂ ದಟ್ಟ ಹಸಿರಿನ ಮರಗಳ ಕಾಡು ಇರುವುದರಿಂದ ಕ್ಯಾಂಪಿಂಗ್ ಅಥವಾ ವಸತಿ ಹೂಡಲು ಸೂಕ್ತ ಸ್ಥಳವಾಗಿದೆ.
ಸಾಹಸಪ್ರಿಯ ಪ್ರವಾಸಿಗರು ಹಾಗು ಸುತ್ತಮುತ್ತಲಿನ ಹಳ್ಳಿಗಳ ಯುವಕರು ಆವಾಗಾವಾಗ ಚಾರಣ ಮಾಡಲು ಇಲ್ಲಿಗೆ ಬರುತ್ತಿರುತ್ತಾರೆ. ಪಕ್ಷಿಗಳ ಕಲರವ, ಎಲೆಗಳ ಸುರು ಸುರು ಹಾಗು ನೀರಿನ ಧಬ ಧಬ ಶಬ್ದದ ನಡುವೆಯೂ ಈ ಸ್ಥಳವು ಧ್ಯಾನ ಮಾಡಲು ಕೂಡ ಸೂಕ್ತವಾಗಿದೆ.
ಈ ತಾಣದ ಸುತ್ತಮುತ್ತಲು ಅನೇಕ ವಸತಿ ಗೃಹಗಳು ಪ್ರವಾಸಿಗರ ಅನುಕೂಲಕ್ಕಾಗಿ ತೆರೆಯಲ್ಪಟ್ಟಿವೆ. ಒಂದೊಮ್ಮೆ ಇಲ್ಲಿಗೆ ಭೇಟಿ ನೀಡಿದರೆಂದರೆ ಇಲ್ಲಿನ ನೆನಪು ಸದಾ ಹಸಿರಾಗಿರುತ್ತದೆ. ಫೊಟೊಗ್ರಾಫಿ ಹುಚ್ಚಿದ್ದವರು ಕೂಡ ಇಲ್ಲಿ ಅನೇಕ ಆನಂದಮಯ ಕ್ಷಣಗಳನ್ನು ಸೆರೆ ಹಿಡಿಯಬಹುದು.