ಲಾಲ್ ದರ್ವಾಜಾ ಮಸೀದಿ ಅಥವ ರೂಬಿ ಗೇಟ್ ಮಸೀದಿಯು ಜೌನಪುರದ ಹೊರಭಾಗದಲ್ಲಿದೆ. ಇದನ್ನು ಸುಲ್ತಾನ ಮೊಹಮದ ಶಾರ್ಕಿಯ ರಾಣಿ ಬೀಬಿ ರಾಜ್ಯಿ 1447 ರಲ್ಲಿ ಕಟ್ಟಿಸಿ ಮುಸ್ಲಿಂ ಸಂತ ಮೌಲಾನ ಸೈಯದ್ ಅಲಿ ದಾವೂದ್ ಕುತ್ಬುದ್ದೀನ್‍ಗೆ ಸಮರ್ಪಿಸಿದಳು. ಇದು ಬೇಗಂಳ ಖಾಸಗಿ ಪ್ರಾರ್ಥನಾ ಮಂದಿರ. ಇದು ಅತಳಾ ಮಸೀದಿಯ ವಾಸ್ತು ಶೈಲಿಯನ್ನು ಹೋಲುತ್ತದೆ. ಆದರೆ ಅದಕ್ಕಿಂತ ಚಿಕ್ಕದು. ಇದಕ್ಕೆ ಉತ್ತರ, ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ದ್ವಾರಗಳಿವೆ.
ಇದರ ಪೂರ್ವದ ಬಾಗಿಲನ್ನು ಕೆಂಪು ಶಿಲೆಯಲ್ಲಿ ಮಾಡಲಾಗಿದೆ. ಇದು ಲಾಲ್ ದರವಾಜ ಅಥವ ರಾಣಿ ಬೀಬಿ ರಾಜ್ಯಿಯ ಮಹಲಿನ ಪಕ್ಕದಲ್ಲಿದೆ. ಇದು ಮಸೀದಿಗೆ ಈ ಹೆಸರು ಬರಲು ಕಾರಣವೇನು ಎಂದು ತಿಳಿಸುತ್ತದೆ. ಲಾಲ ದರವಾಜ ಮಸೀದಿಯನ್ನು ಹಿಂದೂ ಸ್ಥಳಗಳು, ದೇವಾಲಯಗಳು ಮತ್ತು ಇತರ ಸ್ಮಾರಕಗಳ ವಸ್ತುಗಳನ್ನು ಬಳಸಿ ಕಟ್ಟಲಾಗಿದೆ.