ಜಾಂಜಗೀರ್ ನ ಶಿವಾರಿನಾರಾಯಣ್ ನ ಪಟ್ಟಣದಲ್ಲಿ ಲಕ್ಷ್ಮೀನಾರಾಯಣ ದೇವಸ್ಥಾನವಿದೆ. ಮಹಾನದಿ ನದಿಯ ದಂಡೆಯ ಮೇಲಿರುವ ಈ ದೇಗುಲವು ಹಾಯ್ ಹಾಯ್ (Hayhay) ವಂಶದ ಅರಸರಿಂದ 11 ನೆಯ ಶತಮಾನದಲ್ಲಿ ನಿರ್ಮಾಣಗೊಂಡಿತೆಂದು ಹೇಳಲಾಗಿದೆ.
ಇದಕ್ಕಿಂತಲೂ ಮಿಗಿಲಾಗಿ, ರಾಮಾಯಣದಲ್ಲಿ ಬರುವ ಭಗವಾನ್ ಶ್ರೀ ರಾಮನ ಭಕ್ತೆಯಾದ ಶಬರಿಯ ಆಶ್ರಮವು ಇಲ್ಲಿ ಕಂಡು ಬರುತ್ತದೆ ಎಂದು ಸ್ಥಳ ಪುರಾಣವು ಹೇಳುತ್ತದೆ. ಲಕ್ಷ್ಮೀನಾರಾಯಣ ದೇವಸ್ಥಾನವು ವೈಷ್ಣವ ಶೈಲಿಯನ್ನು ಪ್ರತಿಬಿಂಬಿಸುವ ಮೆಚ್ಚತಕ್ಕ ವಾಸ್ತುಶಿಲ್ಪವನ್ನು ಹೊಂದಿದೆ. ಮಾಘ ಪೂರ್ಣಿಮೆಯ ಸಂದರ್ಭವನ್ನು ಈ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ.