ಜೈನ ಮಂದಿರ ಧರ್ಮಶಾಲವು ಜೈನ ಯಾತ್ರಾರ್ಥಿಗಳಿಗೆ ಬಹುದೊಡ್ಡ ವಿಶ್ರಾಂತಿ ಧಾಮವಾಗಿದೆ. ಕ್ಷತ್ರಿಯ ಕುಂಡ ಗ್ರಾಮಕ್ಕೆ ಹಾದು ಹೋಗುವ ಮಾರ್ಗದಲ್ಲಿ ಈ ಸ್ಥಳವನ್ನು ಸಂದರ್ಶಿಸಬಹುದು. ಈ ವಿಶ್ರಾಂತಿಧಾಮದೊಳಗೆ ದೊಡ್ಡ ಮಹಾವೀರನ ದೇವಾಲಯವಿದೆ. ಇದು ಜಮುಯಿ ಜಿಲ್ಲೆಯ ಸಿಕಂದರ ಬ್ಲಾಕಿನಿಂದ 20ಕಿಮೀ ದೂರದಲ್ಲಿದೆ. ಇದು ತನ್ನ ವೈಭವ ಮತ್ತು ಪ್ರಶಾಂತತೆಗೆ ಹೆಸರುವಾಸಿಯಾಗಿದೆ.