1967 ರಲ್ಲಿ ಸ್ಥಾಪನೆಯಾದ ಗುಜರಾತ ಆಯುರ್ವೇದ ವಿಶ್ವವಿದ್ಯಾನಿಲಯ ಗುಜರಾತಿನ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯವಾಗಿದೆ ಹಾಗೂ ಭಾರತದ ಅತ್ಯಂತ ಪ್ರಾಚೀನ ಔಷಧ ಕ್ರಮವಾದ ಆಯುರ್ವೇದಕ್ಕೆ ಮುಡಿಪಾಗಿದೆ. ಆಯುರ್ವೇದಕ್ಕೆ ಸಹಾಯಕವಾಗಬೇಕೆಂದು ನಿರ್ಮಾಣವಾದ ಈ ವಿಶ್ವವಿದ್ಯಾನಿಲಯಕ್ಕೆ ನವನಗರವನ್ನು ಆಳಿದ ರಾಜರು ನೆರವನ್ನಿತ್ತಿದ್ದಾರೆ.
ಈ ವಿಶ್ವವಿದ್ಯಾನಿಲಯದಲ್ಲಿ ಹಲವು ಶಾಖೆಗಳಿವೆ. ಇವುಗಳಲ್ಲಿ ಸಣ್ಣ ಹಾಗೂ ದೀರ್ಘಕಾಲದ ಕೋರ್ಸುಗಳಿವೆ. ವಿಶ್ವವಿದ್ಯಾನಿಲಯದಲ್ಲಿ ತನ್ನದೇ ಆದ ಆಸ್ಪತ್ರೆ ಇದೆ ಹಾಗೂ ಔಷದ್ಯೀಯ ಸಸ್ಯಗಳ ಉದ್ಯಾನವೂ ಇದೆ.