ಜಿಯಾರತ್ ಬಾಬಾ ಬುಡನ್ ಷಾ, ಜಮ್ಮು ಪ್ರದೇಶದ ಜನಪ್ರಿಯ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ, ಸತ್ವಾರಿ ವಿಮಾನ ನಿಲ್ದಾಣದ ಹತ್ತಿರದಲ್ಲಿದೆ. ಈ ಸ್ಥಳವನ್ನು ಪ್ರೀತಿ ಮತ್ತು ಸಾಮರಸ್ಯಕ ತತ್ವ ಬೋಧಿಸಿದ ಧಾರ್ಮಿಕ ನಾಯಕ ಜಿಯಾರತ್ ಬಾಬಾ ಬುಡನ್ ಷಾಗೆ ಮೀಸಲಿರಿಸಲಾಗಿದೆ. ಈ ಪವಿತ್ರ ದೇವಾಲಯ ದೇಶದ ಜಾತ್ಯತೀತತೆಯ ಭಾವನೆಯನ್ನು ಪ್ರತಿನಿಧಿಸುತ್ತದೆ. ದೇವಾಲಯದ ವಾಸ್ತುಶಿಲ್ಪ ಶೈಲಿಯಲ್ಲಿ, ಜಮ್ಮು ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರಭಾವಶಾಲಿಯಾಗಿ ತೋರಿಸಲಾಗಿದೆ. ಈ ಸ್ಥಳ ಜಮ್ಮು ನಗರದಿಂದ 8 ಕಿ. ಮೀ ದೂರದಲ್ಲಿದೆ. ಇಲ್ಲಿಗೆ ಭೇಟಿ ನೀಡಲು ಪ್ರವಾಸಿಗರು ಯಾವುದೇ ಸಾರಿಗೆ ವಿಧಾನವನ್ನು ಆಯ್ದುಕೊಳ್ಳಬಹುದು.
ಸಾವಿರಾರು ಭಕ್ತರು ಸಂತರ ಆಶೀರ್ವಾದವನ್ನು ಪಡೆಯಲು ವಾರ್ಷಿಕವಾಗಿ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಪಂಚ ಪೀರ್, ಜಿಯಾರತ್ ಪೀರ್ ಮೀಠಾ ಮತ್ತು ಜಿಯಾರತ್ ಬಾಬಾ ರೋಷನ್ ಷಾ ವಾಲಿ ಮೊದಲಾದ ಕೆಲವು, ಜಿಯಾರತ್ ಬಾಬಾ ಬುಡನ್ ಷಾ ಗೆ ಹತ್ತಿರದಲ್ಲಿರುವ ಜನಪ್ರಿಯ ಆಕರ್ಷಣೆಗಳು.