Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಮಹಾರಾಜರ ಅರಮನೆ

ಮಹಾರಾಜರ ಅರಮನೆ, ಜೈಸಲ್ಮೇರ್

1

ಮಹಾರಾಜರ ಅರಮನೆಯು ಜೈಸಲ್ಮೇರ್ ಕೋಟೆಯ ಸಂಕೀರ್ಣದಲ್ಲಿದೆ. ಇದನ್ನು ಜೈಸಲ್ಮೇರ್ ಕೋಟೆ ಅರಮನೆ ವಸ್ತು ಸಂಗ್ರಹಾಲಯ ಮತ್ತು ಪಾರಂಪರಿಕ ಕೇಂದ್ರವೆಂದು ಸಹ ಕರೆಯುತ್ತಾರೆ. ಐದು ಅಂತಸ್ತಿನ ಈ ಕಟ್ಟಡವು ಒಳಾಂಗಣದಲ್ಲಿ ಕೆತ್ತನೆಗಳಿಂದ ಕೂಡಿದ ಕಿಟಕಿಗಳು ಮತ್ತು ಮೊಗಸಾಲೆಗಳಿಗಾಗಿ ಪ್ರಸಿದ್ಧಿಯನ್ನು ಪಡೆದಿದೆ. ಅರಮನೆಯ ಎಡ ಭಾಗದ ಪ್ರವೇಶ ದ್ವಾರವು ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿದ್ದು, ರಾಜರು ಸಭೆಗಳನ್ನು ನಡೆಸಲು ಬಳಸುತ್ತಿದ್ದರು.

ಪ್ರವಾಸಿಗರು ಇಲ್ಲಿ ರಜತ ಖಚಿತವಾದ ಸಿಂಹಾಸನವನ್ನು , ಹಾಸಿಗೆ, ಪಾತ್ರೆ- ಪಗಡೆಗಳು, ಸ್ಥಳೀಯ ಮುದ್ರೆಗಳು, ಬ್ಯಾಂಕ್ ನೋಟುಗಳು ಮತ್ತು ಶಿಲಾಪ್ರತಿಮೆಗಳನ್ನು ಕಾಣಬಹುದು. ಈ ಅರಮನೆಯ ಮೇಲಿನಿಂದ ಜೈಸಲ್ಮೇರ್ ನಗರದ ಪಕ್ಷಿನೋಟವನ್ನು ಕಾಣಬಹುದು. ಬೆಳಗಿನ ಜಾವ ಈ ಅರಮನೆಗೆ ಭೇಟಿಕೊಡಲು ಹೇಳಿ ಮಾಡಿಸಿದ ಸಮಯವಾಗಿದೆ. ಆಗ ಇಲ್ಲಿ ಪ್ರವಾಸಿಗರ ಜನ ಸಂದಣಿ ಕಡಿಮೆಯಿರುತ್ತದೆ. ಅರಮನೆಯು ಸಂದರ್ಶಕರಿಗಾಗಿ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಸಮಯದಲ್ಲಿ ಬೆಳಗ್ಗೆ 8 ರಿಂದ ಸಂಜೆ 6ರವರೆಗೆ ತೆರೆದಿರುತ್ತದೆ.

 

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat