Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಸಲ್ಮೇರ್ » ಆಕರ್ಷಣೆಗಳು » ಜೈಸಲ್ಮೇರ್ ಕೋಟೆ

ಜೈಸಲ್ಮೇರ್ ಕೋಟೆ, ಜೈಸಲ್ಮೇರ್

9

ಜೈಸಲ್ಮೇರ್ ಕೋಟೆ ’ ಜೈಸಲ್ಮೇರಿನ ಹೆಮ್ಮೆ’ ಎಂದೆ ಪರಿಗಣಿಸಲ್ಪಟ್ಟಿದೆ. ಇದು ನಗರದ ಹೃದಯ ಭಾಗದಲ್ಲಿ ನೆಲೆಸಿದೆ. ಸೂರ್ಯಾಸ್ತದ ಸಮಯದಲ್ಲಿ ಈ ಕೋಟೆಯ ಹಳದಿ ಮರಳುಗಲ್ಲುಗಳು ಬಂಗಾರದ ಬಣ್ಣದಲ್ಲಿ ಕಂಗೊಳಿಸುವ ಕಾರಣವಾಗಿ ಇದನ್ನು ’ಸೋನಾರ್ ಕಿಲಾ’ ಅಥವಾ ’ ಗೋಲ್ಡನ್ ಫೊರ್ಟ್ ’ ಎಂಬ ಹೆಸರಿನಿಂದ ಸಹ ಕರೆಯುತ್ತಾರೆ. ಈ ಕೋಟೆಯನ್ನು ಭತಿ ರಜಪೂತ್ ರಾಜನಾದ ಜೈಸಲ್ 1156ರಲ್ಲಿ ತ್ರಿಕುರ ಬೆಟ್ಟದ ಮೇಲೆ ನಿರ್ಮಿಸಿದನು. ಜೈಸಲ್ಮೇರ್ ಕೋಟೆಯು ಸುಂದರವಾದ ಹವೇಲಿಗಳಿಂದ ಅಥವಾ ಮಹಲುಗಳಿಂದ, ದೇವಾಲಯಗಳಿಂದ ಮತ್ತು ಸೈನಿಕರ ಹಾಗು ವರ್ತಕರ ವಸತಿ ಸಂಕೀರ್ಣಗಳಿಂದ ತುಂಬಿದೆ. ಈ ಕೋಟೆಯು 30 ಅಡಿಗಳಷ್ಟು ಎತ್ತರದ ಗೋಡೆಗಳಿಂದ ಆವೃತವಾಗಿದೆ. ಇದೊಂದು ಬೃಹತ್ ಕೋಟೆಯಾಗಿದ್ದು 99 ಬುರುಜುಗಳನ್ನು ಹೊಂದಿದೆ.

ಕೋಟೆಯ ಸಂಕೀರ್ಣದಲ್ಲಿ ಹಲವಾರು ಬಾವಿಗಳಿದ್ದು , ಅವುಗಳು ಇಲ್ಲಿನ ನಿವಾಸಿಗಳಿಗೆ ನಿರಂತರವಾಗಿ ನೀರನ್ನು ಸರಬರಾಜು ಮಾಡುತ್ತವೆ. ಈ ಕೋಟೆಯು ರಜಪೂತರ ಮತ್ತು ಮೊಘಲರ ವಾಸ್ತುಶಿಲ್ಪದ ಒಂದು ಅದ್ಭುತ ಸಂಯೋಜನೆಯನ್ನು ಹೊಂದಿದೆ. ರಾಜಸ್ಥಾನದ ಇತರ ಕೋಟೆಗಳಂತ ಈ ಕೋಟೆಯು ಸಹ ಅಖೈ ಪೊಲ್ , ಹವಾ ಪೊಲ್, ಸೂರಜ್ ಪೊಲ್ ಮತ್ತು ಗಣೇಶ್ ಪೊಲ್ ಎಂಬ ವಿವಿಧ ಬಗೆಯ ದ್ವಾರಗಳನ್ನು ಹೊಂದಿದೆ. ಇವುಗಳೆಲ್ಲದರಲಿ ಅಖೈ ಪೊಲ್ ಅಥವ ಪ್ರಥಮ ದ್ವಾರವು ತನ್ನ ಅದ್ವಿತೀಯವಾದ ವಾಸ್ತು ಶೈಲಿಯಿಂದಾಗಿ ಗಮನ ಸೆಳೆಯುತ್ತದೆ. ಈ ದ್ವಾರವನ್ನು 1156 ರಲ್ಲಿ ರಾಜ ಪರಿವಾರ ಮತ್ತು ವಿಶೇಷ ಗಣ್ಯರ ಪ್ರವೇಶಿಸುವ ಉದ್ದೇಶಕ್ಕಾಗಿ ನಿರ್ಮಿಸಲಾಗಿತ್ತು.ಪ್ರವಾಸಿಗರು ಜೈಸಲ್ಮೇರ್ ನಗರದಿಂದ ಈ ಕೋಟೆಗೆ ಆಟೋ ರಿಕ್ಷಾ ಅಥವಾ ರಿಕ್ಷಾಗಳಲ್ಲಿ ತಲುಪಬಹುದು. ಭೇಟಿ ಕೊಡುವ ಸಮಯ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಇರುತ್ತದೆ.

 

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat