ಜೈಸಲ್ಮೇರಿನ ಕೋಟೆಯ ಒಳಗಡೆ ಜೈನ ದೇವಾಲಯಗಳು ನೆಲೆಸಿವೆ. ಈ ಪುರಾತನ ಕಾಲದ ಜೈನ ದೇವಾಲಯಗಳನ್ನು 12 ರಿಂದ 15 ನೇ ಶತಮಾನ ನಡುವೆ ನಿರ್ಮಿಸಲಾಗಿದೆ. ಈ ದೇವಾಲಯಗಳನ್ನು ಜೈನ ತೀರ್ಥಂಕರರಾದ ಶಂಭದೇವ್,ಋಷಭದೇವರಿಗಾಗಿ ನಿರ್ಮಿಸಲಾಗಿದೆ. ಪ್ರವಾಸಿಗರು ಇಲ್ಲಿನ ದೇವಾಲಯಗಳ ಗೋಡೆಗಳ ಮೇಲೆ ಸುಂದರವಾದ ಪ್ರಾಣಿಗಳ ಮತ್ತು ಮನುಷ್ಯರ ಚಿತ್ರಗಳನ್ನು ಚಿತ್ರಿಸಿರುವ ದಿಲ್ವಾರ ಶೈಲಿಯ ಚಿತ್ರಕಲೆಯನ್ನು ಕಾಣಬಹುದು.