ಗಲ್ತಾಜಿಯು ಜೈಪುರದಿಂದ 10 ಕಿ.ಮೀ ದೂರದಲ್ಲಿದೆ. ಇಲ್ಲಿ ದೇವಸ್ಥಾನ, ಪೆವಿಲಿಯನ್‌ಗಳು ಮತ್ತು ನೈಸರ್ಗಿಕ ತಿರುವುಗಳಿವೆ. ಈ ಪ್ರದೇಶವು ಗುಡ್ಡದ ಮೇಲಿದೆ. ಇಲ್ಲಿರುವ ದೇವಸ್ಥಾನವು ಸೂರ್ಯ ದೇವರಿಗೆ ಅರ್ಪಿತವಾದದ್ದು. ದಿವಾನ್ ಕೃಪಾರಾಮ್‌ರಿಂದ ಈ ದೇವಸ್ಥಾನ ಕಟ್ಟಲ್ಪಟ್ಟಿದೆ. ಇದು ಎಷ್ಟು ಎತ್ತರವಾಗಿದೆ ಎಂದರೆ ಇಡೀ ನಗರದ ಎಲ್ಲಾ ಭಾಗಗಳನ್ನೂ ಇಲ್ಲಿಂದ ನೋಡಬಹುದು. ಗುಲಾಬಿ ಬಣ್ಣದ ಕಲ್ಲುಗಳನ್ನು ಬಳಸಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಪೇಂಟಿಂಗ್‌ಗಳು ಮತ್ತು ಕೆತ್ತನೆಗಳು ಇಲ್ಲಿನ ಸೌಂದರ್ಯವನ್ನು ಹೆಚ್ಚಿಸಿದೆ.