Search
  • Follow NativePlanet
Share
ಮುಖಪುಟ » ಸ್ಥಳಗಳು » ಜೈಪುರ » ಆಕರ್ಷಣೆಗಳು » ಸಿಟಿ ಪ್ಯಾಲೇಸ್

ಸಿಟಿ ಪ್ಯಾಲೇಸ್, ಜೈಪುರ

16

ಜೈಪುರದ ಮಧ್ಯಭಾಗದಲ್ಲಿರುವ ಸಿಟಿ ಪ್ಯಾಲೇಸ್‌ ಪ್ರಮುಖ ಪ್ರವಾಸಿ ತಾಣ. ನಗರದಲ್ಲಿ ಪ್ರಮುಖವಾದ ಕಟ್ಟಡವಿದು. ಈ ಅರಮನೆಯನ್ನು ನಿರ್ಮಿಸಿದ್ದು ರಾಜ ಮಹಾರಾಜ ಸವಾಯಿ ಮಾಧೋ ಸಿಂಗ್‌. ಇದನ್ನು ಪ್ರವೇಶ ಪ್ರದೇಶವಾಗಿ ಉಪಯೋಗಿಸಲಾಗುತ್ತಿತ್ತು. ಈಗ ಈ ಕಟ್ಟಡವನ್ನು ರಾಜ ಎರಡನೇ ಸವಾಯಿ ಮಾನ್‌ ಸಿಂಗ್‌ರಿಗೆ ಸಂಬಂಧಿಸಿದಂತೆ ಮ್ಯೂಸಿಯಂ ಮಾಡಲಾಗಿದೆ. ಮ್ಯೂಸಿಯಂನಲ್ಲಿ ರಾಜರ ಸಾಮಗ್ರಿಗಳ ವಿವಿಧ ಶ್ರೇಣಿಗಳಾದ ಬನಾರಸಿ ಸಿಲ್ಕ್ ಸೀರೆಗಳು ಮತ್ತು ಪಶ್ಮಿನಾ ಶಾಲ್‌ಗಳನ್ನು ಪ್ರದರ್ಶನಕ್ಕಿಡಲಾಗಿದೆ. ಮಹಾರಾಜ ಒಂದನೇ ಸವಾಯಿ ಮಾಧೋ ಸಿಂಗ್‌ ತೊಟ್ಟ ಬಟ್ಟೆಗಳನ್ನೂ ಕೂಡಾ ಇಲ್ಲಿ ಕಾಣಬಹುದು.ಮಹಾರಾಣಿ ಅರಮನೆ ಅಥವಾ ಕ್ವೀನ್ಸ್ ಪ್ಯಾಲೇಸ್‌ ಸಿಟಿ ಪ್ಯಾಲೇಸಿನ ಆವರಣದಲ್ಲೇ ಇದೆ. ಇದು ಪುರಾತನ ರಜಪೂತ ಯುದ್ಧ ಸಾಮಗ್ರಿಗಳನ್ನಿಡುವ ತಾಣವಾಗಿತ್ತು. ಈ ಮ್ಯೂಸಿಯಂನಲ್ಲಿ ಈಗ ಕತ್ತಿಗಳು, ಚೈನ್ ಆಯುಧಗಳು, ಗನ್‌ಗಳು, ಪಿಸ್ತೂಲುಗಳು, ವಿಷ ಸವರಿದ ಬ್ಲೇಡ್‌ಗಳು ಮತ್ತು ಗನ್‌ ಪೌಡರಿನ ಚೀಲಗಳನ್ನು ಇಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿರುವ ವಿಶಿಷ್ಟ ಚಾಕುವನ್ನು ನೋಡಲೇಬೇಕು. ಇಲ್ಲಿನ ಕೆಲವು ಸಾಮಗ್ರಿಗಳು ಸುಮಾರು 15ನೇ ಶತಮಾನದ್ದು. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಿಟಿ ಪ್ಯಾಲೇಸ್‌ ತೆರೆದಿರುತ್ತದೆ. ಪ್ರವೇಶ ಶುಲ್ಕ ಭಾರತೀಯರಿಗೆ 75 ರೂ ಮತ್ತು ವಿದೇಶೀಯರಿಗೆ 300 ರೂ. ಆಗಿರುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun