ಅನೋಖಿ ಮ್ಯೂಸಿಯಂ ಆಫ್ ಹ್ಯಾಂಡ್ ಪೇಂಟಿಂಗ್ ಇರುವುದು ಚಾನ್ವಾರ್ ಪಲ್ಕಿವಾಲೋಂಕಿ ಹವೇಲಿಯಲ್ಲಿ. ಇದು ಜೈಪುರದ ಸಾಂಪ್ರದಾಯಿಕ ಕಲೆಯನ್ನು ರಕ್ಷಿಸುವುದಕ್ಕಾಗಿ ಮಾಡಲಾಗಿರುವ ದತ್ತಿ ಸಂಸ್ಥೆ. ಇಲ್ಲಿನ ಕಲಾಕಾರರಿಗೆ ಎನ್ಜಿಒ ಕೇವಲ ತರಬೇತಿಯನ್ನು ಮಾತ್ರವಲ್ಲದೇ ಉದ್ಯೋಗ ಅವಕಾಶವನ್ನೂ ನೀಡುತ್ತದೆ. ಈ ಸಂಸ್ಥೆಯ ಮುಖ್ಯ ಗುರಿಯೆಂದರೆ ಪುರಾತನ ಕಾಲದ ಸಂಪ್ರದಾಯಗಳನ್ನು ಜೀವಂತವಾಗಿರಿಸುವುದಾಗಿದೆ. ಮ್ಯೂಸಿಯಂನಲ್ಲಿ ಕೆಫೆ ಮತ್ತು ಕಾರ್ಡ್ಗಳು, ಆಭರಣಗಳು ಮತ್ತು ಬಟ್ಟೆಗಳನ್ನು ಮಾರಲು ಅಂಗಡಿಗಳಿವೆ.