1886 ರಲ್ಲಿ ಮಹಾರಾಜ ರಾಮ್ ಸಿಂಗ್ರಿಂದ ಆಲ್ಬರ್ಟ್ ಹಾಲ್ ನಿರ್ಮಾಣ ಆಯಿತು. ನಾಲ್ಕು ಲಕ್ಷ ರೂಪಾಯಿಯ ಬರ ಪರಿಹಾರ ಕಾರ್ಯಕ್ರಮದ ಅಂಗವಾಗಿ ಈ ಕಟ್ಟಡವನ್ನು ನಿರ್ಮಿಸಲಾಯಿತು. ಇದು ರಾಮ ನಿವಾಸ್ ಬಾಗ್ನಲ್ಲಿದೆ. ಈ ಕಟ್ಟಡದ ವಿನ್ಯಾಸ ಮಾಡಿದ್ದು ಸರ್ ಸ್ವಿಂಟನ್ ಜಾಕೋಬ್. ಸದ್ಯ ಈ ಆಲ್ಬರ್ಟ್ ಹಾಲ್ ಮ್ಯೂಸಿಯಂ ಆಗಿ ಪರಿವರ್ತನೆಯಾಗಿದೆ. ಇಲ್ಲಿ ಲೋಹದ ಮೂರ್ತಿಗಳು, ಪೇಂಟಿಂಗ್ಗಳು, ಪಳೆಯುಳಿಕೆಗಳು, ಕಾರ್ಪೆಟ್ಗಳು ಮತ್ತು ಬಣ್ಣಬಣ್ಣದ ಗಾಜುಗಳನ್ನು ಸಂಗ್ರಹಿಸಲಾಗಿದೆ. ಒಂದು ಪ್ರಾಣಿ ಸಂಗ್ರಹಾಲಯ ಮತ್ತು ರವೀಂದ್ರ ರಂಗ ಮಂಚ (ಥಿಯೇಟರ್)ವನ್ನು ಇಲ್ಲಿ ನಿರ್ಮಿಸಲಾಗಿದೆ. ಆಲ್ಬರ್ಟ್ ಹಾಲ್ ಮ್ಯೂಸಿಯಂ ಬೆಳಗ್ಗೆ 9 ರಿಂದ ಸಂಜೆ 5ರ ತನಕ ತೆರೆದಿರುತ್ತದೆ. ಪ್ರವೇಶ ಶುಲ್ಕ ಭಾರತೀಯರಿಗೆ ಕೇವಲ 20ರೂ. ಮತ್ತು ವಿದೇಶಿಯರಿಗೆ 150 ರೂ, ಇದೆ.