ದಂಡೇಶ್ವರ್ ದೇವಾಲಯವು ಜಾಗೇಶ್ವರ ದೇವಾಲಯ ಸಂಕೀರ್ಣದಿಂದ ಸ್ವಲ್ಪ ಮೇಲೆ ನೆಲೆಗೊಂಡಿದೆ. ಆದರೆ ಪ್ರಸ್ತುತ ಇದು ದುಸ್ಥಿತಿಯಲ್ಲಿದೆ. ಜಾಗೇಶ್ವರ ದೇವಾಲಯ ಸಂಕೀರ್ಣದಲ್ಲಿರುವ ಇನ್ನಿತರ ಶಿವಲಿಂಗಗಳಿಗಿಂತ ಇದರಲ್ಲಿನ ಶಿವಲಿಂಗಕ್ಕೆ ಬಳಸಲಾಗಿರುವ ಕಲ್ಲು ಸ್ವಲ್ಪ ವಿಭಿನ್ನವಾಗಿದೆ. ಈ ದೇವಾಲಯದ ಸಂಕೀರ್ಣವು ಹಲವಾರು ಸುಂದರ ಪ್ರಾಚೀನ ಚಿತ್ರಗಳಿಂದ ಅಲಂಕೃತಗೊಂಡಿದೆ. ಈ ದೇವಾಲಯದ ಪ್ರವೇಶದ್ವಾರದಲ್ಲಿರುವ ಒಂದು ದೊಡ್ಡ ಕಬ್ಬಿಣದ ಘಂಟೆಯು ಈ ಸ್ಥಳದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಇದೆಲ್ಲದಕ್ಕಿಂತ ಮಿಗಿಲಾಗಿ 18ನೇ ಶತಮಾನದಲ್ಲಿ ಸ್ಥಾಪಿಸಲಾದ ಒಂದು ನಾಟ್ಯವಾಡುವ ಭಂಗಿಯ ಶಿವನ ವಿಗ್ರಹವನ್ನೂ ಸಹ ನಾವಿಲ್ಲಿ ನೋಡಬಹುದು.